ಇಂಟರ್ವ್ಯೂ ವೇಳೆ ನಿಮ್ಮಲ್ಲಿ ಟ್ಯಾಲೆಂಟ್ ಅವರು ಗುರುತಿಸಿದ್ರೆ ಕೆಲಸ ಖಾಯಂ

ಉದ್ಯೋಗಕ್ಕೆ ಬಂದ ಅಭ್ಯರ್ಥಿಗಳಿಂದ ಸಂದರ್ಶನಕಾರರು ಏನೆಲ್ಲಾ ಬಯಸುತ್ತಾರೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

By Kavya

ಸಂದರ್ಶನಕ್ಕೆ ಹಾಜರಾಗುವುದು ಎಂದ್ರೆ ನಮ್ಮ ಜೀವನದಲ್ಲಿ ತುಂಬಾ ಕಷ್ಟದ ಕೆಲಸ. ಕಾರಣ ಎಲ್ಲಿ ಸಂದರ್ಶನದಲ್ಲಿ ಫೈಲಾಗಿ ಕೆಲಸ ಪಡೆಯುವಲ್ಲಿ ವಿಫಲರಾಗುತ್ತೇವೆ ಅನ್ನೋ ಭಯ. ಇನ್ನೂ ಈ ಭಯದಿಂದಲೇ ನಾವು ಇಂಟರ್ ವ್ಯೂ ಅಲ್ಲಿ ಫೈಲಾಗುತ್ತೇವೆ ಅಷ್ಟೇ ಅಲ್ಲ ಸಂದರ್ಶನಕಾರರು ನಮ್ಮಿಂದ ಏನೂ ಭಯಸುತ್ತಾರೆ ಎನ್ನೋದು ಊಹಿಸುವುದು ಕೂಡಾ ಕಷ್ಟವಾಗಿದೆ.

ಇದನ್ನು ಕೂಡಾ ಓದಿ: ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ... ತಿಂಗಳ ಕೊನೆಯಲ್ಲಿ ಕೈ ತುಂಬಾ ಸಂಬಳ

ಇಂಟರ್ವ್ಯೂ ವೇಳೆ ನಿಮ್ಮಲ್ಲಿ ಟ್ಯಾಲೆಂಟ್ ಅವರು ಗುರುತಿಸಿದ್ರೆ ಕೆಲಸ ಖಾಯಂ

ಇನ್ನೂ ಸಂದರ್ಶನಕಾರರು ಸಂದರ್ಶನ ವೇಳೆ ನಿಮ್ಮ ಸ್ಕಿಲ್ ಚೆಕ್ ಮಾಡುತ್ತಾರೆ ಎಂಬುವುದು ಗೊತ್ತಿರುವ ವಿಚಾರ. ಆದ್ರೆ ಸ್ಕಿಲ್ ಮಾತ್ರವಲ್ಲದೇ ಉದ್ಯೋಗಕ್ಕೆ ಬಂದ ಅಭ್ಯರ್ಥಿಗಳಿಂದ ಸಂದರ್ಶನಕಾರರು ಏನೆಲ್ಲಾ ಬಯಸುತ್ತಾರೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ಇದನ್ನು ಕೂಡಾ ಓದಿ: ಫಸ್ಟ್ ಜಾಬ್... ನಿಮ್ಮ ತಯಾರಿ ಹೀಗಿರಲಿ!

ಐ ಕಾಂಟೆಕ್ಟ್:

ಸಂದರ್ಶನಕಾರರ ಮುಂದೆ ನೀವು ನಿಂತಾಗ ಅವರು ಮೊದಲಿಗೆ ಟೆಸ್ಟ್ ಮಾಡುವುದು ನಿಮ್ಮ ಐ ಕಾಂಟೆಕ್ಟ್ ಲೆವೆಲ್ ಎಷ್ಟಿದೆ ಎಂದು. ಆದ್ರೆ ಹೆಚ್ಚಿನ ಅಭ್ಯರ್ಥಿಗಳು ಸಂದರ್ಶನವೇಳೆ ತಮ್ಮಲ್ಲಿ ಕಾಂಫಿಡೆನ್ಸ್ ಮೂಡಲು ನೆಲ ನೋಡುವುದು, ಡೆಸ್ಕ್ ಮೇಲೆ ನೋಟ ಬೀರುವುದು ಮುಂತಾದೆಲ್ಲವನ್ನ ಮಾಡುತ್ತಾರೆ. ಆದ್ರೆ ಇದರಿಂದ ನಿಮ್ಮ ಇಂಟರ್ ವ್ಯೂ ಅಪೂರ್ಣವಾಗುತ್ತದೆ. ಹಾಗಾಗಿ ಸಂದರ್ಶನ ವೇಳೆ ಸಂದರ್ಶನಕಾರರ ಜತೆ ಸರಿಯಾಗಿ ಐ ಕಾಂಟೆಕ್ಟ್ ಮಾಡಲು ಮರೆಯದಿರಿ.

ಕಾಂಫಿಡೆನ್ಸ್:

ಈ ಪದ ನೀವು ತುಂಬಾ ಬಾರಿ ಕೇಳಿರಬಹುದು. ಕಾಂಫಿಡೆನ್ಸ್ ಇದ್ರೆ ಸುಲಭವಾಗಿ ಸಕ್ಸಸ್ ಮನೆಯ ಬಾಗಿಲು ತೆರೆಯುತ್ತೆ. ನೀವು ಯಾವ ಫೀಲ್ಡ್ ಅಲ್ಲಿ ಇದ್ದೀರಾ ಅನ್ನೋದು ಇಂಪೋರ್ಟೆಂಟ್ ಅಲ್ಲ. ಆದ್ರೆ ನಿಮ್ಮಲ್ಲಿನ ಕಾಂಫಿಡೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಈ ಗುಣವನ್ನೇ ಸಂದರ್ಶನಕಾರರು ನಿಮ್ಮಿಂದ ಬಯಸುತ್ತಾರೆ ಕೂಡಾ.

ಇದನ್ನು ಕೂಡಾ ಓದಿ: ಕಾಲೇಜು ಕ್ಯಾಂಟೀನ್ ಅಲ್ಲಿ ನೀವು ಇದನ್ನೆಲ್ಲಾ ಮಾಡಿದ್ದೀರಾ?

ಕಮ್ಯುನಿಕೇಶನ್ ಪವರ್:

ನೀವು ಯಾವ ಭಾಷೆ ಆಡುತ್ತೀರಿ ಅನ್ನೋದು ಪ್ರಮುಖವಲ್ಲ ಬದಲಿಗೆ ನಿಮ್ಮ ಮಾತು ಇತತರು ಕೇಳುವಂತೆ ಅವರ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವುದು ಮುಖ್ಯ. ಸಂದರ್ಶನ ವೇಳೆ ನೀವೇನೇ ಮಾತನಾಡಿ ಆದ್ರೆ ನಿಮ್ಮ ಮಾತು ಅರ್ಥಪೂರ್ಣವಾಗಿರುವುದು, ಹಾಗೂ ನಿಮ್ಮ ಮಾತಿನಲ್ಲಿ ಸೆನ್ಸ್ ಇರುವುದು ಮುಖ್ಯ.

ಮೈಂಡ್ ಶಾರ್ಪ್ ಆಗಿರಬೇಕು:

ಹೌದು ಸಂದರ್ಶನ ವೇಳೆ ಆಬ್ ಸೆಂಟ್ ಮೈಂಡ್ ಆಗಿದ್ರೆ ನೀವು ಖಂಡಿತ ಕೆಲಸ ಕಳೆದುಕೊಳ್ಳುತ್ತೀರಾ. ಸಂದರ್ಶನ ವೇಳೆ ಸಂದರ್ಶನಕಾರರು ನಿಮ್ಮ ಬಳಿ ನೀವು ನಿಮಗೆ ಸಂಬಂಧಪಟ್ಟಿರದೇ ಇರುವ ಕೆಲವೊಂದು ಪ್ರಶ್ನೆಗಳನ್ನ ಕೇಳಬಹುದು. ಅಂದ್ರೆ ಅವರು ನಿಮ್ಮ ಮೈಂಡ್ ಟೆಸ್ಟ್ ಮಾಡಲು ಕೆಲವೊಂದ ಕ್ಲಿಷ್ಟಕರ ಪ್ರಶ್ನೆಗಳನ್ನ ಕೇಳಬಹುದು. ಈ ಟೈಂನಲ್ಲಿ ನೀವು ಅವರು ಕೇಳುವ ಪ್ರಶ್ನೆಯನ್ನ ಸರಿಯಾಗಿ ಆಲಿಸುವುದು ಮುಖ್ಯ. ಅವರು ಮತ್ತೊಮ್ಮೆ ಪ್ರಶ್ನೆಯನ್ನ ರಿಪೀಟ್ ಮಾಡುವಂತೆ ಮಾಡಬೇಡಿ.

ಇದನ್ನು ಕೂಡಾ ಓದಿ: ಕಾಲೇಜಿನ ಮೊದಲ ದಿನ... ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದು ಹೇಗೆ ಗೊತ್ತಾ?

ನೀತಿಶಾಸ್ತ್ರ:

ಪ್ರತಿಯೊಬ್ಬ ಅಭ್ಯರ್ಥಿಯೂ ಹೊಂದಿರಲೇಬೇಕಾದ ಅರ್ಹತೆ ಅಂದ್ರೆ ನೀತಿ ಶಾಸ್ತ್ರ. ಇದನ್ನೇ ಇಂಟರ್ ವ್ಯೂ ವೇಳೆ ಸಂದರ್ಶನಕಾರರು ಬಯಸುತ್ತಾರೆ. ಇದರಿಂದ ನೀವು ಮುಂದೆ ಹೇಗೆ ಕೆಲಸ ಮಾಡಬಲ್ಲಿರಿ ಎಂದು ಅವರು ತಿಳಿಯುತ್ತಾರೆ. ಹಾಗಾಗಿ ನಿಮ್ಮ ಈ ಗುಣವನ್ನ ನೀವಾಗಿಯೇ ಅವರ ಮುಂದೆ ತೆರೆದಿಡುವುದು ಉತ್ತಮ.

More News  

For Quick Alerts
ALLOW NOTIFICATIONS  
For Daily Alerts

English summary
The fear of getting rejected causes a lot of panic and sometimes, we even screw up with the interview just because of that. Actually, it is a bit difficult because we never know what our interviewer is expecting from us. Of course, they need the skills for the job but apart from that, there are a lot of other things too.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+