ಸರ್ಕಾರ ನಡೆಸುವ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಂಡ್ರೆ ಹೆಚ್ಚು ಅಂಕ ಸ್ಕೋರ್ ಮಾಡಬಹುದು?

By Kavya

ದೇಶಕ್ಕಾಗಿ ಹಾಗೂ ಸಮಾಜಕ್ಕಾಗಿ ದುಡಿಯಬೇಕು ಅಥವಾ ಸೇವೆ ಸಲ್ಲಿಸಬೇಕು ಎಂಬ ಕನಸು ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಇರುತ್ತದೆ. ಅಂತಹ ಕನಸು ನನಸಾಗಬೇಕಾದ್ರೆ ಸಿವಿಲ್ ಸರ್ವೀಸ್ ಆಯೋಜಿಸುವ ಪರೀಕ್ಷೆಯಲ್ಲಿ ನೀವು ಪಾಲ್ಗೊಳ್ಳಬೇಕು. ಸಿವಿಲ್ ಸರ್ವೀಸ್ ದೇಶದ ಸೇವೆ ಸಲ್ಲಿಸಲು ಹಲವಾರು ಅವಕಾಶಗಳನ್ನ ನಿಮಗೆ ನೀಡುತ್ತದೆ. ನೀವು ಅದನ್ನ ಸರಿಯಾಗಿ ಸದುಪಯೋಗ ಪಡಿಸಿಕೊಂಡ್ರೆ ಸರ್ಕಾರಿ ಕೆಲಸ ನಿಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರ ನಡೆಸುವ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಂಡ್ರೆ ಹೆಚ್ಚು ಅಂಕ ಸ್ಕೋರ್ ಮಾಡಬಹುದು?

 

ಆದ್ರೆ ಸರ್ಕಾರ ನಡೆಸುವ ಈ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಿ ಪಾಸಾಗುವುದೆ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ. ನೀವು ಇಂತಹ ಪರೀಕ್ಷೆಗಳನ್ನ ಬರೆಯಬೇಕು ಎಂದು ಅಂದುಕೊಂಡಿದ್ದರೆ ಇಲ್ಲಿದೆ ನಿಮಗೆ ಟಿಪ್ಸ್

More Read: ರೆಸ್ಯೂಮ್ ನಲ್ಲಿ ಹವ್ಯಾಸ-ಆಸಕ್ತಿ ಬಗ್ಗೆ ಹೇಗೆ ತಿಳಿಸಿದ್ರೆ ಸರಿ ಗೊತ್ತಾ?

ಪ್ಲ್ಯಾನ್ ಮಾಡಿಕೊಳ್ಳಿ

ಪ್ಲ್ಯಾನ್ ಮಾಡಿಕೊಳ್ಳಿ

ಎಲ್ಲಿಂದ ಪ್ರಾರಂಭಿಸಬೇಕು, ಹೇಗೆ ಪ್ರಾರಂಭಿಸಬೇಕು ಮತ್ತು ಏನು ಓದಬೇಕು ಎಂದು ಮೊದಲಿಗೆ ಅರ್ಥ ಮಾಡಿಕೊಳ್ಳಿ. ಏನೆಲ್ಲಾ ಓದಬೇಕು ಎಂದು ಮೊದಲಿಗೆ ಪ್ಲ್ಯಾನ್ ಹಾಕಿಕೊಳ್ಳಿ. ಸಿಲೇಬಸ್ ಗೆ ತಕ್ಕಂತೆ ಸ್ಟ್ಯಾಟಜಿ ಮಾಡಿಕೊಳ್ಳಿ. ಇದು ನಿಜಕ್ಕೂ ವರ್ಕೌಟ್ ಆಗುವುದು. ರೈಲ್ವೇ ಪರೀಕ್ಷೆ ಅಥವಾ ಇನ್ನಿತ್ತರ ಸರ್ಕಾರಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪ್ರಮುಖವಾಗಿ ಸಿಲೇಬಸ್ ಈ ರೀತಿ ಇರುತ್ತದೆ.

  • ಗಣಿತ ( 10ನೇ ತರಗತಿ ವರೆಗಿನ ಗಣಿತ ಪಠ್ಯ ಅಭ್ಯಸಿಸಿ)
  • ಇಂಗ್ಲೀಷ್
  • ರೀಸನಿಂಗ್
  • ಸಾಮಾನ್ಯ ಜ್ಞಾನ
  • ಕಂಪ್ಯೂಟರ್ ಜ್ಞಾನ
ಸ್ಟೆಪ್ ಬೈ ಸ್ಟೆಪ್ ಆಗಿ ಓದಿಕೊಳ್ಳಿ

ಸ್ಟೆಪ್ ಬೈ ಸ್ಟೆಪ್ ಆಗಿ ಓದಿಕೊಳ್ಳಿ

  • ಸ್ಟೆಪ್ ಬೈ ಸ್ಟೆಪ್ ಆಗಿ ಓದುದರಿಂದ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಬೇರೆ ಪುಸ್ತಕ ಅಥವಾ ಅತೀ ಹೆಚ್ಚು ಪುಸ್ತಕ ಓದುವ ಬದಲು ಎಲ್ಲಾ ಸಿಲೇಬಸ್ ಕವರ್ ಆಗಿರುವಂತಹ ಒಂದೇ ಪುಸ್ತಕವನ್ನ ಕಂಪ್ಲೀಟ್ ಆಗಿ ಓದುವುದು ಬೆಸ್ಟ್.
  • ಮಾಡೆಲ್ ಪ್ರಶ್ನಾ ಪತ್ರಿಕೆಯನ್ನ ಕೂಡಾ ಅಭ್ಯಸಿಸಿ.
  • ಪ್ರ್ಯಾಕ್ಟೀಸ್ ಪುಸ್ತಕ ಹಾಗೂ ಪ್ರ್ಯಾಕ್ಟೀಸ್ ಮಾಕ್ ಟೆಸ್ಟ್ ಖರೀದಿಸಿ
  • ಪರೀಕ್ಷೆಗೆ ಮುನ್ನ ಒಂದು ತಿಂಗಳು ಬಾಕಿ ಇರುವಾಗ ಮತ್ತೆ ರಿವೈಸ್ ಮಾಡಿಕೊಂಡು ಓದಿ
  • ಕಂಪ್ಯೂಟರ್ ಜ್ಞಾನ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ ಓದಲು ಪ್ರಾರಂಭಿಸಿ

More Read: ಇತ್ತೀಚೆಗಿನ ಯುವಜನತೆಗೆ ಕೈ ತುಂಬಾ ಸಂಪಾದಿಸಲು ಯೂನಿಕ್ ಕೆರಿಯರ್ ಆಯ್ಕೆಗಳು!

ಒಂದು ವಿಷಯ ಮೇಲೆ ಹೆಚ್ಚು ಫೋಕಸ್ ಮಾಡಿ ಆದ್ರೆ ಎಲ್ಲವನ್ನ ಕೂಡಾ ಕವರ್ ಮಾಡಿ
 

ಒಂದು ವಿಷಯ ಮೇಲೆ ಹೆಚ್ಚು ಫೋಕಸ್ ಮಾಡಿ ಆದ್ರೆ ಎಲ್ಲವನ್ನ ಕೂಡಾ ಕವರ್ ಮಾಡಿ

ಹೌದು ಪ್ರಮುಖ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಹೆಚ್ಚು ಪೋಕಸ್ ಮಾಡಿ ಆದ್ರೆ ಉಳಿದ ವಿಷಯಗಳನ್ನ ಕಡೆಗಣಿಸದೇ ಅವುಗಳನ್ನ ಕೂಡಾ ಒಂದು ಬಾರಿ ಮೇಲಿಂದ ಮೇಲೆ ಓದಿಕೊಳ್ಳಿ. ಅತೀ ಹೆಚ್ಚು ಜ್ಞಾನ ಸಂಪಾದಿಸುವ ಅಗತ್ಯವಿರುತ್ತದೆ.

ಟೈಂ ಮ್ಯಾನೇಜ್‌ಮೆಂಟ್ ತಿಳಿದುಕೊಳ್ಳಿ

ಟೈಂ ಮ್ಯಾನೇಜ್‌ಮೆಂಟ್ ತಿಳಿದುಕೊಳ್ಳಿ

ನಿಮ್ಮ ಸ್ಟಡಿ ಪ್ಲ್ಯಾನ್ ನಲ್ಲಿ ಟೈಂ ಮ್ಯಾನೇಜ್‌ಮೆಂಟ್ ತಿಳಿದುಕೊಳ್ಳುವುದು ಬೆಸ್ಟ್. ಇಂತಹ ಪರೀಕ್ಷೆ ನೀವು ಬರೆಯಲಿದ್ದರೆ ಟೈಂ ಮ್ಯಾನೇಜ್‌ಮೆಂಟ್ ಸ್ಟ್ಯಾಟಜಿ ಕೂಡಾ ನೀವು ತಿಳಿದುಕೊಳ್ಳುವುದು ಬೆಸ್ಟ್. ಇದರಿಂದ ನೀವು ಪರೀಕ್ಷೆಯಲ್ಲಿ ಪಾಸಾಗುವುದು ಮಾತ್ರವಲ್ಲದೇ ಅತೀ ಹೆಚ್ಚು ಅಂಕ ಸ್ಕೋರ್ ಕೂಡಾ ಮಾಡಬಹುದು.

ಸಿಲೇಬಸ್ ನೋಡಿದ ಬಳಿಕ ನಿಮಗೆ ಯಾವುದು ಸುಲಭವಿದೆ ಯಾವುದು ಕಷ್ಟವಿದೆ ಎಂದು ಅಂದಾಜು ಸಿಗುವುದು. ಇದರ ಆಧಾರದ ಮೇಲೆ ನೀವು ಯಾವುದು ಮೊದಲು ಓದುವುದು ಹಾಗೂ ಯಾವುದು ನಂತರ ಓದುವುದು ಎಂದು ಪ್ಲ್ಯಾನ್ ಮಾಡಿ ಟೈಂ ಸೆಟ್ ಮಾಡಿಕೊಳ್ಳಿ. ಈ ರೀತಿಯಾಗಿ ನೀವು ಪ್ಲ್ಯಾನ್ ಮಾಡಿಕೊಳ್ಳುವುದರಿಂದ ಒಂದು ತಿಂಗಳೊಳಗೆ ಓದಿ ಮುಗಿಸಬಹುದು. ಅಷ್ಟೇ ಅಲ್ಲ ಮತ್ತೆ ಎರಡು ಬಾರಿ ರಿವಿಷನ್ ಕೂಡಾ ಮಾಡಬಹುದು.

More Read: ಸಂದರ್ಶನದಲ್ಲಿ ಕೇಳುವ ಈ 4 ಕಾಮನ್ ಪ್ರಶ್ನೆಗಳಿಗೆ ಕಾಮನ್ ಆಗಿ ಉತ್ತರಿಸಿ ಕೆಲಸಗಿಟ್ಟಿಸುವುದು ಹೇಗೆ?

ಪರೀಕ್ಷೆ ಮುನ್ನ

ಪರೀಕ್ಷೆ ಮುನ್ನ

ಹೌದು ಪರೀಕ್ಷೆಗೆ ಇನ್ನೇನೋ 4 ದಿನ ಬಾಕಿ ಇರುವಾಗ ಮತ್ತೆ ಮೊದಲಿನಿಂದ ಒಂದು ಬಾರಿ ರಿವಿಷನ್ ಮಾಡಿಕೊಳ್ಳಿ.ಈ ಮೊದಲು ಓದುವಾಗ ಮಾಡಿಕೊಂಡಿರುವ ಶಾರ್ಟ್ ನೋಟ್ಸ್ ಮೇಲೆ ಒಂದು ಬಾರಿ ಕಣ್ಣು ಹಾಯಿಸಿ. ಇದರಿಂದ ನಿಮ್ಮ ಕಾಂಫಿಡೆನ್ಸ್ ಮಟ್ಟ ಕೂಡಾ ಹೆಚ್ಚುವುದು ಹಾಗೂ ಓದಿರುವುದು ಕೂಡಾ ನೆನಪಲ್ಲಿ ಉಳಿಯುತ್ತದೆ

For Quick Alerts
ALLOW NOTIFICATIONS  
For Daily Alerts

English summary
Serving Nation and Society is the dream of everyone. Civil services gives you an opportunity to directly contribute to nation building but getting into it, is not as easy as you are thinking. First You must pass the civil services exams. Here Some tips for how to crack the civil services exams easily
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more