ಸಂದರ್ಶನದಲ್ಲಿ ಕೇಳುವ ಈ 4 ಕಾಮನ್ ಪ್ರಶ್ನೆಗಳಿಗೆ ಕಾಮನ್ ಆಗಿ ಉತ್ತರಿಸಿ ಕೆಲಸಗಿಟ್ಟಿಸುವುದು ಹೇಗೆ?

ಜಾಬ್ ಇಂಟರ್ವ್ಯೂನಲ್ಲಿ ಕೆಲವೊಂದು ಕಾಮನ್ ಪ್ರಶ್ನೆಗಳನ್ನ ಕೇಳುತ್ತಾರೆ. ಇನ್ನು ಈ ಪ್ರಶ್ನೆಗಳು ಯಾವುದೇ ಪುಸ್ತಕ ಆಧಾರಿತವಾಗಿರದೇ ನೀವು ಸ್ಮಾರ್ಟ್ ಆಗಿ ಉತ್ತರಿಸಬೇಕು.

By Kavya

ಜಾಬ್ ಇಂಟರ್ವ್ಯೂನಲ್ಲಿ ಕೆಲವೊಂದು ಕಾಮನ್ ಪ್ರಶ್ನೆಗಳನ್ನ ಕೇಳುತ್ತಾರೆ. ಇನ್ನು ಈ ಪ್ರಶ್ನೆಗಳು ಯಾವುದೇ ಪುಸ್ತಕ ಆಧಾರಿತವಾಗಿರದೇ ನೀವು ಸ್ಮಾರ್ಟ್ ಆಗಿ ಉತ್ತರಿಸಬೇಕು. ಆಗ ಮಾತ್ರ ನೀವು ಬಯಸಿದ್ದ ಜಾಬ್ ನಿಮ್ಮದಾಗಲು ಸಾಧ್ಯ.

ಸಂದರ್ಶನದಲ್ಲಿ ಕೇಳುವ ಈ 4 ಕಾಮನ್ ಪ್ರಶ್ನೆಗಳಿಗೆ ಕಾಮನ್ ಆಗಿ ಉತ್ತರಿಸಿ ಕೆಲಸಗಿಟ್ಟಿಸುವುದು ಹೇಗೆ?

ಕಾಲೇಜಿನಿಂದ ಹೊರಗೆ ಬಂದೊಡನೆ ಕೆಲಸದ ಹುಡುಕಾಟ ಶುರುವಾಗುತ್ತದೆ. ಅದಕ್ಕಾಗಿ ನೀವು ಅದೆಷ್ಟೋ ಇಂಟರ್ವ್ಯೂಗಳನ್ನ ಫೇಸ್ ಮಾಡಬೇಕಾಗುತ್ತದೆ. ಇನ್ನು ಸಂದರ್ಶನ ವೇಳೆ ನೀವು ಕಾಲೇಜಿನಲ್ಲಿ ಕಲಿತಿರುವ ವಿಷಯಕ್ಕಿಂತ ಇತರ ಕಾಮನ್ ವಿಷಯಗಳ ಬಗ್ಗೆ ಕೇಳಲಾಗುತ್ತದೆ. ಇನ್ನು ಇಂತಹ ಪ್ರಶ್ನೆಗಳಿಗೆ ಉತ್ತರಿಸುವಾಗ ಮೊದಲಿಗೆ ನಿಮ್ಮ ಕಾಂಫಿಡೆಂಸ್ ನೀವು ಹೆಚ್ಚಿಸಿಕೊಳ್ಳಬೇಕು. ಹಾಗೂ ಸರಿಯಾಗಿ ಹ್ಯಾಂಡಲ್ ಮಾಡುವ ಕಲೆ ತಿಳಿದಿರಬೇಕು.

More Read: ಈ 4 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಬ್ಯುಸಿನೆಸ್ ಖಂಡಿತಾ ಸಕ್ಸಸ್ ಆಗುತ್ತದೆMore Read: ಈ 4 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಬ್ಯುಸಿನೆಸ್ ಖಂಡಿತಾ ಸಕ್ಸಸ್ ಆಗುತ್ತದೆ

ನಿಮ್ಮ ಸ್ಟ್ರೆಂಥ್ ಹಾಗೂ ವೀಕ್‌ನೆಸ್ ಬಗ್ಗೆ ತಿಳಿಸಿ?

ನಿಮ್ಮ ಸ್ಟ್ರೆಂಥ್ ಹಾಗೂ ವೀಕ್‌ನೆಸ್ ಬಗ್ಗೆ ತಿಳಿಸಿ?

ಇಂತಹ ಪ್ರಶ್ನೆ ಕೇಳಿದಾಗ ನೀವು ಕಂಫ್ಯೂಸ್ ಗೆ ಒಳಗಾಗಬಹುದು. ಸ್ಟ್ರೆಂಥ್ ಬಗ್ಗೆ ಮಾತು ಪ್ರಾರಂಭಿಸಿದಾಗ ಆ ಹುದ್ದೆಗೆ ಸಂಬಂಧಪಟ್ಟ ಟ್ಯಾಲೆಂಟ್ ಬಗ್ಗೆ ಹೇಳುತ್ತಾ ಹೋಗಬೇಡಿ. ಅದೇ ರೀತಿ ವೀಕ್ ನೆಸ್ ಬಗ್ಗೆ ಮಾತು ಪ್ರಾರಂಭಿಸಿದಾಗ ಜಾಬ್ ಗಾಗಿ ಯಾವುದೇ ವೀಕ್ ನೆಸ್ ಇಲ್ಲ ಎಂದು ಸುಳ್ಳು ಉತ್ತರ ನೀಡಬೇಡಿ. ಯಾಕೆಂದ್ರೆ ಪ್ರಪಂಚದಲ್ಲಿ ಯಾರೂ ಪರ್ಫೇಕ್ಟ್ ಇರುವುದಿಲ್ಲ. ಒಂದಲ್ಲ ಒಂದು ವೀಕ್‌ನೆಸ್ ಇದ್ದೇ ಇರುತ್ತದೆ. ಹಾಗಾಗಿ ಯಾವುದೇ ವೀಕ್ ನೆಸ್ ಇಲ್ಲ ಎಂದು ಹೇಳಿ ಪೇಚಿಗೆ ಸಿಲುಕಬೇಡಿ

ಕೆಲಸ ಮಾಡುವ ಸ್ಪಿರೀಟ್ ಇದ್ದು, ಒಬ್ಬನಾದ್ರೂ ಸರಿ ಆದಷ್ಟು ಬೇಗ ಕೆಲಸ ಮಾಡಿ ಮುಗಿಸುತ್ತೇನೆ. ಹಾಗೂ ಈ ವೇಳೆ ನಿಮ್ಮ ಕಾಂಫಿಡೆಂಸ್ ಕೊರತೆ, ನಾಚಿಕೆ ಸ್ವಭಾವ, ನರ್ವಸ್ ವರ್ತನೆ ಹಾಗೂ ಸಾಫ್ಟ್ ನೇಚರ್ ಬಗ್ಗೆ ತಿಳಿಸಬೇಡಿ. ಹಾಗೂ ನೀವು ಮುಂಗೋಪಿಯಾಗಿದ್ದರೆ ಆ ಬಗ್ಗೆಯೂ ಇಲ್ಲಿ ಮಾತೆತ್ತಬೇಡಿ. ಹಾಗೂ ವಿಕ್‌ನೆಸ್ ಬಗ್ಗೆ ತಿಳಿಸುವಾಗ ನಿಮ್ಮ ಬಗ್ಗೆ ವಿಮರ್ಶಿಸಲು ಹೋಗಬೇಡಿ. ಬದಲಿಗೆ ಆ ಹುದ್ದೆಗೆ ಸಂಬಂಧಪಡದ ವೀಕ್‌ನೆಸ್ ಹೇಳಬಹುದು. ಹಾಗೂ ಆ ವೀಕ್ ನೆಸ್ ನಿಂದ ನೀವು ಹೇಗೆ ಹೊರಬಲ್ಲೀರಿ ಎಂಬುವುದು ಕೂಡಾ ತಿಳಿಸಿ.

 

ನಿಮ್ಮ ರೋಲ್ ಮಾಡೆಲ್ ಯಾರು?

ನಿಮ್ಮ ರೋಲ್ ಮಾಡೆಲ್ ಯಾರು?

ನೀವು ಅದೆಷ್ಟೋ ಮಂದಿಯಿಂದ ಉದ್ಯೋಗಕ್ಕೆ ಸಂಬಂಧಪಟ್ಟಿರುವುದು ಕೇಳಿ ಕಲಿತುಕೊಂಡಿರುತ್ತೀರಾ. ಅದೆಷ್ಟೋ ಮಂದಿ ನಿಮ್ಮಲ್ಲಿ ಸ್ಪೂರ್ತಿ ತುಂಬಿರುತ್ತಾರೆ. ಆದ್ರೆ ಸಂದರ್ಶನ ವೇಳೆ ಈ ಪ್ರಶ್ನೆ ಕೇಳಿದಾಗ ನಿಮಗೆ ಸರಿಯಾದ ವ್ಯಕ್ತಿಯ ಹೆಸರು ಹೇಳಲು ನೆನಪಾಗದೇ ಇರಬಹುದು. ಹಾಗೂ ಈ ಟೈಂನಲ್ಲಿ ನೀವು ತಲೆ ಕೆಳಗೆ ಹಾಕುತ್ತೀರಿ. ಇದರಿಂದ ನಿಮ್ಮ ಜಾಬ್ ಕೈ ತಪ್ಪಿ ಕೂಡಾ ಹೋಗಬಹುದು.

ಇಂತಹ ಪ್ರಶ್ನೆಗೆ ನಿಮ್ಮ ಹೆತ್ತವರು, ಸ್ನೇಹಿತರು ಇಲ್ಲ ಸೆಲಬ್ರಿಟಿಗಳ ಹೆಸರು ಸೂಚಿಸಿ. ಆದ್ರೆ ಯಾಕೆ ಅವರ ಹೆಸರು ಹೇಳಿದ್ದೀರಿ ಎಂದು ತಿಳಿಸಲು ಕಾರಣಗಳನ್ನ ಹೇಳಲು ಮರೆಯದಿರಿ. ಅವರ ಪರ್ಸನಾಲಿಟಿ, ಐಡಿಯಾಗಳು, ಅವರ ಸಾಧನೆಗಳ ಬಗ್ಗೆ ವಿವರಿಸಿ ಉತ್ತರಿಸಿ.

More Read: ಕಲಿಕೆ ಕೈ ಹಿಡಿಯಲಿಲ್ಲ ಎಂದಾದ್ರೆ ಈ ಫೀಲ್ಡ್‌ನಲ್ಲಿ ಕೆರಿಯರ್ ರೂಪಿಸಿಕೊಂಡು ಚೆನ್ನಾಗಿ ಸಂಪಾದಿಸಿ

 

ಸೋಲನ್ನ ನಿಭಾಯಿಸಬಲ್ಲೀರಾ?

ಸೋಲನ್ನ ನಿಭಾಯಿಸಬಲ್ಲೀರಾ?

ಸೋಲಂದ್ರೆ ನಿಮಗೆ ಭಯ. ಹಾಗೂ ಸೋಲಿನಿಂದ ನೀವು ಆದಷ್ಟು ಬೇಗ ತತ್ತರಿಸುತ್ತೀರಾ ಇಲ್ಲ ನೀವು ಉತ್ಸಾಹ ಕಳೆದುಕೊಳ್ಳುತ್ತೀರಾ ಎಂದು ಯಾವುದೇ ಕಾರಣಕ್ಕೂ ಸಂದರ್ಶನ ವೇಳೆ ಈ ಮೇಲಿನ ಪ್ರಶ್ನೆ ಕೇಳಿದಾಗ ಉತ್ತರಿಸಬೇಡಿ. ಶಾಲೆಯಲ್ಲಿ ಫೈಲಾದಾಗ ನೀವೆಷ್ಟು ಆತಂಕಗೊಳಗಾಗಿದ್ದೀರಿ ಆ ಟೈಂನಲ್ಲಿ ನೀವೆಷ್ಟು ಅತ್ತಿದ್ದೀರಾ ಎಂದೆಲ್ಲಾ ಸಂದರ್ಶನ ವೇಳೆ ವಿವರಿಸಲು ಹೋಗಬೇಡಿ

ಈ ಪ್ರಶ್ನೆ ಕೇಳಿದಾಗ ಬೋಲ್ಡ್ ಆಗಿ ಉತ್ತರಿಸಿ. ಸೋಲು ಹಾಗೂ ತಿರಸ್ಕಾರವನ್ನ ನಾನು ಚ್ಯಾಲೇಂಜ್ ಆಗಿ ಸ್ವೀಕರಿಸುತ್ತಾನೆ. ಈ ಹಿಂದೆ ನೀವು ಯಾವುದಾದ್ರೂ ಸೋಲನ್ನ ಅನುಭವಿಸಿದ್ದು ತಿಳಿಸಿ ಹಾಗೂ ಆ ಸೋಲಿನಿಂದ ಮತ್ತೆ ಸಕ್ಸಸ್ ಆದದ್ದು ಹೇಗೆ ಎಂದು ಕೂಡಾ ತಿಳಿಸಿ.

 

ಈ ಮೊದಲಿನ ಜಾಬ್ ಬಿಟ್ಟಿದ್ದು ಯಾಕೆ?

ಈ ಮೊದಲಿನ ಜಾಬ್ ಬಿಟ್ಟಿದ್ದು ಯಾಕೆ?

ಈ ಪ್ರಶ್ನೆ ಕೇಳಿದಾಗ ನೀವು ಯಾವುದೇ ಕಾರಣಕ್ಕೂ ನಿಮ್ಮ ಈ ಹಿಂದಿನ ಕಂಪನಿ ಹಾಗೂ ಅಲ್ಲಿನ ನೌಕರರ ಬಗ್ಗೆ ನೆಗಟೀವ್ ಆಗಿ ಮಾತನಾಡಬೇಡಿ. ಇದರಿಂದ ನಿಮ್ಮ ಬಗ್ಗೆ ಸಂದರ್ಶನಕಾರರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಸಾಧ್ಯವಾದಷ್ಟು ಕಡಿಮೆ ಮಾತುಗಳಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಬೆಸ್ಟ್.

ಇಂತಹ ಪ್ರಶ್ನೆಗಳಿಗೆ ಜೆನ್ಯುನ್ ಆಗಿ ಉತ್ತರಿಸುವುದು ಬೆಸ್ಟ್. ಯಾಕೆ ಹಿಂದಿನ ಜಾಬ್ ಬಿಟ್ಟಿದ್ದೀರಾ ಎಂದು ತಿಳಿಸುವಾಗ ಆ ಜಾಬ್ ನಿಂದ ನೀವು ಏನೆಲ್ಲಾ ಕಲಿತಿದ್ದೀರಾ ಎಂದು ತಿಳಿಸುವುದರ ಜತೆಗೆ ಹಾಗೂ ಮುಂದೆ ಭವಿಷ್ಯತ್ ನಲ್ಲಿ ಹೊಸ ಹೊಸ ಕೆಲಸ ಕಲಿಯುವ ಉದ್ದೇಶದಿಂದ ಆ ಜಾಬ್ ಬಿಟ್ಟಿರುವುದಾಗಿ ಕೂಲ್ ಆಗಿ ತಿಳಿಸಿ. ಹಾಗೂ ಮುಂದೆ ಹೆಚ್ಚಿನದ್ದನ್ನ ಕಲಿಯುವ ಮನಸ್ಸಿದೆ ಎಂಬುವುದು ಅವರ ಮುಂದೆ ತಿಳಿಸಿ.

More Read: ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

 

For Quick Alerts
ALLOW NOTIFICATIONS  
For Daily Alerts

English summary
Today, no matter which field you plan to venture into, you will come across intense competition. May it be appearing for UPSC exams, engineering entrance exams or even exams in the banking sector, you will face thousands of fellow candidates attempting the similar exams. This not only lowers your chances of clearing the exam but also gives the examiners more reasons to set tough papers to improve the quality of the screening process.We bring you the Four most common questions asked in any job interview that you might relate to but always find yourself flinching at!
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X