ಕೈಯಲ್ಲಿ ಕೆಲಸ ಇಲ್ಲವಾ... ಡಿಗ್ರಿ, ಇಂಫ್ಲ್ಯೂಯೆನ್ಸ್ ಇಲ್ಲದೇ ಯೂಟ್ಯೂಬ್ ಚ್ಯಾನೆಲ್ ಸ್ಟಾರ್ಟ್ ಮಾಡಿ ಹಣ ಸಂಪಾದಿಸಿ!

Posted By:

ಇದೀಗ ಜಗತ್ತು ಬದಲಾಗಿದೆ. ನೀವು ಹೆಚ್ಚು ಓದಿಲ್ಲವೆಂದಾದ್ರೂ ಹೆಚ್ಚು ದುಡಿಯಬಹುದು. ಇದರ ಕ್ರೆಡಿಟ್ ಸೋಶಲ್ ಮೀಡಿಯಾಕ್ಕೆ ಸಲ್ಲುತ್ತದೆ. ನಿಮಗೆ ಓದಲು ಮನಸ್ಸು ಇಲ್ಲವಾ ಆದ್ರೆ ನೀವು ಚೆನ್ನಾಗಿ ಮಾತನಾಡ ಬಲ್ಲವರಾಗಿದ್ದೀರಾ. ಅಷ್ಟೇ ಅಲ್ಲ ನೀವು ಯಾವುದೇ ವಿಷಯವನ್ನ ಚೆನ್ನಾಗಿ ವಿವರಿಸಬಲ್ಲವರಾಗಿದ್ದೀರಾ, ಹಾಗಿದ್ರೆ ಈ ಫೀಲ್ಡ್‌ನಲ್ಲಿ ನೀವು ಪಕ್ಕಾ ಹಿಟ್ ಆಗ್ತೀರಾ.

ಕೆಲಸ ಇಲ್ಲ ಆದ್ರೆ ಟ್ಯಾಲೆಂಟ್ ಇದ್ಯಾ... ಯೂಟ್ಯೂಬ್ ಚಾನೆಲ್‌ ಅಕೌಂಟ್ ಹೇಗೆ ಕ್ರಿಯೇಟ್ ಮಾಡುವುದು ತಿಳಿಯಿರಿ

ಯಾವ ಫೀಲ್ಡ್ ಅಂತೀರಾ... ಹೌದು ನಾವು ಯೂಟ್ಯೂಬ್ ಕೆರಿಯರ್ ಬಗ್ಗೆ ಮಾತನಾಡುತ್ತಿದ್ದೇವೆ. ಇದಕ್ಕೆ ನೀವು ಒಂದು ಕೆಲಸ ಮಾಡಿದ್ರೆ ಆಯಿತು. ಯೂಟ್ಯೂಬ್ ಕೆರಿಯರ್ ಪ್ರಾರಂಭಿಸಬೇಕೆಂದು ನೀವಿದ್ದರೆ ಮೊದಲಿಗೆ ಯೂಟ್ಯೂಬ್ ನಲ್ಲಿ ಒಂದು ಅಕೌಂಟ್ ಕ್ರಿಯೇಟ್ ಮಾಡಿ. ಇನ್ನು ಅಕೌಂಟ್ ಹೇಗೆ ಕ್ರಿಯೆಟ್ ಮಾಡಬೇಕು ಎಂದು ನಾವು ಹೇಳಿಕೊಡುತ್ತೇವೆ. ಅದಕ್ಕಿಂತ ಮುನ್ನ ಚ್ಯಾನೆಲ್ ಪ್ರಾರಂಭಿಸಲು ಏನೆಲ್ಲಾ ಮುಖ್ಯ ಎಂಬುವುದು ತಿಳಿಯಿರಿ.

ಟಾಪಿಕ್ ಬಗ್ಗೆ ಯೋಚಿಸಿ:

ಯೂಟ್ಯೂಬ್ ನಲ್ಲಿ ಅಕೌಂಟ್ ಪ್ರಾರಂಭಿಸುವ ಮುನ್ನ ಜನರಿಗೆ ಯಾವ ವಿಷಯದ ಬಗ್ಗೆ ತಿಳಿಸಬಹುದು ಎಂದು ಮೊದಲು ಯೋಚಿಸಿ. ಅಷ್ಟೇ ಅಲ್ಲ ಜನರಿಗೆ ಎಂತಹ ವಿಷಯದ ಮೇಲೆ ಆಸಕ್ತಿ ಹೆಚ್ಚಿರುತ್ತದೆ ಎಂಬುವುದು ಮೊದಲು ತಿಳಿದುಕೊಳ್ಳಿ. ಜತೆಗೆ ನೀವು ಯಾವ ವಿಷಯದ ಬಗ್ಗೆ ಹತೋಟಿ ಹೊಂದಿದ್ದೀರಾ, ಯಾವ ವಿಷಯನ್ನ ಚೆನ್ನಾಗಿ ಅರ್ಥ ಮಾಡಿಕೊಂಡು, ವಿವರಿಸಬಲ್ಲೀರಾ ಎಂಬುವುದು ಕೂಡಾ ನೀವು ಯೋಚಿಸಬೇಕು. ಆ ವಿಷಯವನ್ನ ಜನರಿಗೆ ಹೇಗೆ ಮುಟ್ಟಿಸಬಹುದು ಎಂದೆಲ್ಲಾ ಯೋಚಿಸಿ. ಹಾಗಾಗಿ ಯೂಟ್ಯೂಬ್ ಚ್ಯಾನೆಲ್ ಪ್ರಾರಂಭಿಸುವ ಮುನ್ನ ವಿಷಯದ ಬಗ್ಗೆ ಯೋಚಿಸಿ

ಚ್ಯಾನೆಲ್ ಹೆಸರು:

ವಿಷಯ ಯೋಚಿಸಿದ ಬಳಿಕ ಇನ್ನು ನಿಮ್ಮ ಯೂಟ್ಯೂಬ್ ಚ್ಯಾನೆಲ್ ಗೆ ಯಾವ ಹೆಸರು ಇಡಬಹುದು ಎಂದು ಯೋಚಿಸಿ. ಚ್ಯಾನೆಲ್ ಹೆಸರು ನಿರ್ಧಿಷ್ಟವಾಗಿರಬೇಕು. ಉದಾಹರಣೆಗೆ ನೀವು ರಿಲೇಶನ್‌ಶಿಪ್ ಬಗ್ಗೆ ಟಿಪ್ಸ್ ಕೊಡುವವರಾಗಿದ್ದರೆ ನೀವು ಆ ಟಾಪಿಕ್ ಗೆ ತಕ್ಕಂತೆ ಚ್ಯಾನೆಲ್ ಹೆಸರು ನೀಡಿ. ಇದರಿಂದ ನಿಮ್ಮ ಚ್ಯಾನೆಲ್ ಬೇಗನೆ ಪ್ರಸಿದ್ಧಿ ಪಡೆಯುತ್ತದೆ. ಯಾವಾಗಲೂ ಒಂದು ಮಾತು ನೆನಪಿಟ್ಟುಕೊಳ್ಳಿ. ಚ್ಯಾನೆಲ್ ಹೆಸರು ಟಾಪಿಕ್ ಗಿಂತ ವಿಪರಿತವಾಗಿರಬಾರದು

ಪ್ರಯೋಜನಕಾರಿ ಕಂಟೆಂಟ್:

ವಿಷಯ ಹಾಗೂ ಚ್ಯಾನೆಲ್ ಗೆ ಹೆಸರು ಯೋಚಿಸದ ಬಳಿಕ ಕಂಟೆಂಟ್ ಬಗ್ಗೆ ಯೋಚಿಸಿ. ಯಾಕೆಂದ್ರೆ ಈ ಫೀಲ್ಡ್‌ನಲ್ಲೂ ತುಂಬಾ ಕಾಂಪಿಟೇಶನ್ ಇದೆ. ಹಾಗಾಗಿ ಇತರರಿಗಿಂತ ನೀವು ವಿಭಿನ್ನ ಕಂಟೆಂಟ್ ಪ್ರಸ್ತುತಪಡಿಸಬೇಕು. ಇತರರ ಕಂಟೆಂಟ್ ಗಿಂತ ಫುಲ್ ಬೇರೆಯಾದ ಯೂನಿಕ್ ಕಂಟೆಂಟ್ ಹಾಕಿ ಜತೆಗೆ ಓದುಗರಿಗೆ ಯೂಸ್‌ಫುಲ್ ಆಗುವಂತಹ ಕಂಟೆಂಟ್ ಹಾಕಿ.

ಸೋಶಲ್ ಮೀಡಿಯಾ:

ಇಷ್ಟೆಲ್ಲಾ ಮಾಡಿದ ಮೇಲೆ ನಿಮ್ಮ ಕೆಲಸ ಇಲ್ಲಿಗೆ ಮುಗಿಯುದಿಲ್ಲ. ಇದೀಗ ನಿಮ್ಮ ಕೆಲಸ ಇನ್ನೂ ಹೆಚ್ಚಾಗುತ್ತದೆ. ಕಂಟೆಂಟ್ ಎಲ್ಲಾ ನೀಡಿದ ಬಳಿಕ ಸೋಶಲ್ ಮೀಡಿಯಾದಲ್ಲಿ ಶೇರ್ ಮಾಡಬೇಕು. ನಿಮ್ಮ ಆರ್ಟಿಕಲ್ ಸೋಶಲ್ ಮೀಡಿಯಾದಲ್ಲಿ ವೈರಲ್ ಆಗುವಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಹಲವಾರು ಗ್ರೂಪ್‌ಗಳ ಸದಸ್ಯರಾಗಬೇಕು.

ಪ್ರತಿದಿನ 4 ರಿಂದ 8 ಸ್ಟೋರಿಯನ್ನಾದ್ರೂ ನೀವು ಸೋಶಲ್ ಮೀಡಿಯಾದಲ್ಲಿ ಶೇರ್ ಮಾಡಿ. ಈ ಸ್ಟೋರಿಯನ್ನ ಪ್ರತಿ ಗ್ರೂಪ್ ಜತೆ ಶೇರ್ ಮಾಡಿ. ಇದರಿಂದ ಹೆಚ್ಚು ಹೆಚ್ಚು ಜನರು ನಿಮ್ಮ ಸ್ಟೋರಿ ಫದುತ್ತಾರೆ. ಹಾಗೆಯೇ ಅವರು ಓದಿದಂತೆ ನೀವು ಹಣ ಕೂಡಾ ಗಳಿಸಬಹುದು.

 

ಪ್ರಚಾರ ಮಾಡಬೇಕು:

ಇದೀಗ ನಿಮ್ಮ ಚ್ಯಾನೆಲ್ ಬಗ್ಗೆ ಪ್ರಚಾರ ಮಾಡಬೇಕು. ಇಲ್ಲವೆಂದಾದ್ರೆ ನೀವು ಹಣ ಗಳಿಸಲು ಸಾಧ್ಯವಿಲ್ಲ. ಹಣ ಗಳಿಸಬೇಕಾದ್ರೆ ನಿಮ್ಮ ಚ್ಯಾನೆಲ್ ಗೆ ಕಮ್ಮಿ ಅಂದ್ರೂ ೧೦ ಸಾವಿರ ಸಬ್‌ಸ್ಕ್ರೈಬರ್ ಇರಬೇಕು. ನೀವು ಜಾಹೀರಾತು ಸಂಸ್ಥೆಯವರ ಜತೆ ಸೇರಿ ಜಾಹೀರಾತುದಾರರ ಜತೆ ಭೇಟಿಯಾಗಿ. ಇದರಿಂದ ಹಣ ಬರಲು ಶುರುವಾಗುತ್ತದೆ. ಇದರ ಬಳಿಕ ನಿಮ್ಮ ಚ್ಯಾನೇಲ್ ಗೆ ಕಮರ್ಷಿಯಲ್ ಜಾಹೀರಾತು ಕೂಡಾ ಬರುತ್ತದೆ.

English summary
YouTube boasts over a billion users. everyday people spend millions of hours in youtube. so why you cant start business in youtube.you cab earn more money from youtube channels. so here is the list about benifts of youtube channels

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia