ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿ

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳ ಬೋಧನಾ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿಯಲ್ಲಿರು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ವಿವಿಧ ವಿಷಯಗಳ ಬೋಧನಾ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ನೇಮಕಾತಿ

ಹುದ್ದೆಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ

ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಪಿಎಚ್.ಡಿ ಸಂಶೋಧನೆ/ಸೆಟ್/ನೆಟ್ ಉತ್ತೀರ್ಣಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಂಬಂಧಿತ ಕಾರ್ಯ ಕ್ಷೇತ್ರದಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವೇತನ

  • ಪ್ರಾಧ್ಯಾಪಕ ಹುದ್ದೆಗೆ: ರೂ.37400-100000/-
  • ಸಹ ಪ್ರಾಧ್ಯಾಪಕ ಹುದ್ದೆಗೆ: ರೂ.37400-67000/-
  • ಸಹಾಯಕ ಪ್ರಾಧ್ಯಾಪಕ ಹುದ್ದೆಗೆ: ರೂ.15600-39100/-

ಅರ್ಜಿ ಸಲ್ಲಿಕೆ

ನಿಗದಿಪಡಿಸಿದ ವೆಬ್ಸೈಟ್ ಮೂಲಕ ಆನ್-ಲೈನ್ ಅರ್ಜಿಗಳನ್ನು ಸಲ್ಲಿಸಿ ಬಳಿಕ ದೊರೆಯುವ ಅರ್ಜಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಅಧಿಕೃತ ದಾಖಲೆಗಳೊಂದಿಗೆ ಲಗತ್ತಿಸಿ ಕಚೇರಿ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ದಪ್ಪಾಕ್ಷರದಲ್ಲಿ ಬರೆಯಬೇಕು.

ಇದನ್ನು ಗಮನಿಸಿ: ಹಂಪಿ ವಿಶ್ವವಿದ್ಯಾಲಯ: ಬೋಧಕ ಹುದ್ದೆಗಳ ನೇಮಕಾತಿ

ಇದನ್ನು ಗಮನಿಸಿ: ಹಂಪಿ ವಿಶ್ವವಿದ್ಯಾಲಯ ಬೋಧಕೇತರ ಹುದ್ದೆಗಳ ನೇಮಕಾತಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸವ ವಿಳಾಸ

The Registrar,
Central University of Karnataka,
Kadaganchi, Aland Road,
Kalaburagi District-585367

ಪ್ರಮುಖ ದಿನಾಂಕಗಳು

  • ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-10-2017
  • ಮುದ್ರಿತ ಅರ್ಜಿ ಪ್ರತಿಯನ್ನು ಕಲುಪಿಸಲು ಕೊನೆಯ ದಿನಾಂಕ: 10-11-2017

ಹೆಚ್ಚಿನ ಮಾಹಿತಿಗಾಗಿ cuk.ac.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The Central University of Karnataka invites online applications from Indian citizens for recruitment to the teaching positions at the level of Professor, Associate Professor and Assistant Professor.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X