ತೆರೆಮೇಲೆ ತೋರಿಸುವ ರಿಯಲ್ ಕಾಲೇಜಿನ ರೀಲ್ ಕಥೆಗಳು!

ಸಿನಿಮಾ ಕಾಲೇಜು ಲೈಫ್ ಬರೀ ರೀಲ್. ಅಂದಿನ ಕುಚ್ ಕುಚ್ ಹೋತಾ ಹೈ, ಮೊಗ್ಗಿನ ಮನಸ್ಸು ಸಿನಿಮಾ ನೋಡಿದ ಅದೆಷ್ಟೋ ಮಂದಿ ರಿಯಲ್ ಲೈಫ್ ಪ್ರಾರಂಭವಾಗುವುದೇ ಕಾಲೇಜ್ ಲೈಫ್ ನಿಂದ ಎಂದು ಅಂದುಕೊಂಡಿದ್ದಾರೆ. ಇನ್ನೂ ಸಿನಿಮಾಗಳಲ್ಲಿ ಬಿಡಿ ಕಾಲೇಜು ಲೈಫ್ ಪರ್ಫೆಕ್ಟ್ ಆಗಿಯೇ ತೋರಿಸುತ್ತಾರೆ. ಹ್ಯಾಪಿ ಎಂಡಿಂಗ್ ಇಂದಲೇ ಮುಕ್ತಾಯವಾಗುತ್ತದೆ. ಈ ಸಿನಿಮಾ ನೋಡಿದ ಶಾಲಾ ಮಕ್ಕಳಿಗೆ ನಾವು ಯಾವಾಗ ಕಾಲೇಜು ಲೈಫ್ ಸ್ಟಾರ್ಟ್ ಮಾಡುವುದು ಎಂದು ತುದಿಗಾಲಲ್ಲಿ ಉತ್ಸುಕರಾಗಿ ನಿಂತಿರುತ್ತಾರೆ.

ತೆರೆಮೇಲೆ ತೋರಿಸುವ ರಿಯಲ್ ಕಾಲೇಜಿನ ರೀಲ್ ಕಥೆಗಳು!

 

ರಿಜೆಕ್ಟ್ ಪದ ಕೇಳಿ ಸಾಕಾಯಿತಾ... ನೋ ವರಿ ಈ ಪದದಿಂದ ಏನೆಲ್ಲಾ ಲಾಭವಿದೆ ಗೊತ್ತಾ?

ಕಾಲೇಜು ಮೆಟ್ಟಿಲು ಹತ್ತಿದ ಬಳಿಕ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ, ಸಿನಿಮಾ ಕಾಲೇಜಿಗೂ, ರೀಲ್ ಕಾಲೇಜಿಗೂ ತುಂಬಾ ವ್ಯತ್ಯಾಸವಿದೆ ಎಂದು. ತೆರೆ ಮೇಲೆ ನೋಡಿದ ಕಾಲೇಜು ನಿಜ ಜೀವನದ ಕಾಲೇಜು ಬೇರೆ ಬೇರೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟಾಗುತ್ತದೆ.

ಬನ್ನಿ ತೆರೆಮೇಲಿನ ಕಾಲೇಜಿಗೂ ರಿಯಲ್ ಕಾಲೇಜಿಗೂ ಇರುವ ವ್ಯತ್ಯಾಸದ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ

ಫ್ಯಾನ್ಸಿ ಕಾರಿನಲ್ಲಿ ಕಾಲೇಜಿಗೆ ಎಂಟ್ರಿ:

ಕೆ೩ಜಿ ಸಿನಿಮಾದಲ್ಲಿ ಹೃತಿಕ್ ರೋಶನ್ ಎಂಟ್ರಿ ನೆನಪಿದ್ಯಾ ನಿಮಗೆ? ದೊಡ್ಡ ಕೆಂಪು ಬಣ್ಣದ ಕಾರಿನಲ್ಲಿ ಸ್ಪೀಡ್ ಆಗಿ ಬಂದಾಗ, ಕಾಲೇಜು ವಿದ್ಯಾರ್ಥಿಗಳೆಲ್ಲ ಬರೀ ಅವನತ್ತನೇ ನೋಟ ಬೀರುವುದು ಸಿನಿಮಾದಲ್ಲಿ ನೀವು ನೋಡಿರಬಹುದು. ಹಾಗಂತ ನಿಮಗೆ ನಿಮ್ಮ ಕಾಲೇಜಿನ ಫಸ್ಟ್ ಡೇಗೆ ಬಿಎಂಡಬ್ಲ್ಯು ಕಾರು ಇಲ್ಲ ಫೆರಾರಿ ಕಾರಿನಲ್ಲಿ ಹೋಗಬೇಕೆಂಬ ಕನಸು ಕಾಣಬಹುದು. ಆದ್ರೆ ಅದು ಹೆಚ್ಚಾಗಿ ಕನಸಾಗಿಯೇ ಉಳಿಯುತ್ತದೆ.

ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!

ಸ್ಟೇಲೀಶ್ ಎಂಟ್ರಿ:

ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರ ಎಂಟ್ರಿ ನಿಮಗೆ ನೆನಪಿರಬಹುದು. ನೀವು ಕೂಡಾ ಅದೇ ರೀತಿ ಬಂದಾಗ ನಿಮ್ಮ ಸುತ್ತ ಹುಡುಗಿಯರು ಹಾಡು ಹಾಡಿ ಡ್ಯಾನ್ಸ್ ಮಾಡುವುದು ನಿರೀಕ್ಷಿಸುತ್ತೀರಾ? ಆಗಿದ್ರೆ ಅದನ್ನ ಮರೆತುಬಿಡಿ. ನಿಜಜೀವನದಲ್ಲಿ ನೀವು ಎಷ್ಟೇ ಸ್ಮಾರ್ಟ್ ಆಗಿದ್ದರೂ ಯಾವ ಹುಡುಗಿಯರು ಕೂಡಾ ನಿಮ್ಮ ಮಂದೆ ಕ್ಯಾಂಪಸ್ ನಲ್ಲಿ ಹಾಡಿ, ಕುಣಿಯುದಿಲ್ಲ.

 

ಸೆಕ್ಸಿ ಉಡುಗೆಗಳು:

ರಾಣಿ ಮುಖರ್ಜಿ, ಅಲಿಯಾ ಭಟ್ ತರಹ ನೀವು ಕೂಡಾ ಒಂದೊಂದು ದಿನಕ್ಕೆ ಬಣ್ಣ ಬಣ್ಣದ ಸೆಕ್ಸಿ ಉಡುಗೆಗಳನ್ನ ತೊಟ್ಟು ಹೋಗಲು ಬಯಸುತ್ತೀರಾ? ಆದ್ರೆ ಇದು ಕೂಡಾ ಕನಸಾಗಿಯೇ ಉಳಿಯುದು. ನಿಜಜೀವನದಲ್ಲಿ ಕಾಲೇಜುಗಳಲ್ಲಿ ಉಡುಗೆಗೆ ತಕ್ಕಂತೆ ಹೆಚ್ಚಿನ ರೂಲ್ಸ್ ಗಳಿರುತ್ತವೆ. ಆದ್ರೆ ರಿಯಲ್ ಲೈಫ್ ಕಾಲೇಜಿನಲ್ಲಿ ನೋ ಹಾಟ್ ಪ್ಯಾಂಟ್, ನೋ ಮಿನಿ ಸ್ಕರ್ಟ್, ನೋ ಕ್ರಾಪ್ ಟಾಪ್, ಉಡುಕೆಲವೊಂದು ಕಾಲೇಜುಗಳು ಸಮವಸ್ತ್ರವನ್ನೇ ಕಡ್ಡಾಯ ಕೂಡಾ ಮಾಡಿರುತ್ತಾರೆ.

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

ಬ್ಯಾಕ್‌ಗ್ರೌಂಡ್ ಮ್ಯೂಸಿಕ್:

ರಿಯಲ್ ಕಾಲೇಜ್ ಲೈಫ್ ನಲ್ಲಿ ಇದು ಹೆಚ್ಚು ನಿರಾಶೆ ತರುವ ಸಂಗತಿ. ನೀವು ಕಾಲೇಜಿಗೆ ಎಂಟ್ರಿ ಆಗುವಾಗ ಬ್ಯಾಕ್‌ ಗ್ರೌಂಡ್ ಮ್ಯೂಸಿಕ್ ಬೇಕೆಂದು ಬಯಸುತ್ತೀರಾ. ಆದ್ರೆ ಈ ಬಯಕೆ ಬರೀ ಕನಸಾಗಿಯೇ ಉಳಿಯುವುದು.

ಕಾಲೇಜು ಹಾಸ್ಟೆಲ್ ಅಲ್ಲಿ ಲೌಡ್ ಮ್ಯೂಸಿಕ್:

ಸಿನಿಮಾಗಳಲ್ಲಿ ಕಾಲೇಜು ಹಾಸ್ಟೆಲ್ ಸೀನ್ ಬಂದ್ರೆ ಆಯಿತು ಇಡೀ ದಿನ ಪಾರ್ಟಿ, ಲೌಡ್ ಮ್ಯೂಸಿಕ್ ನೀವು ನೋಡಿರುತ್ತೀರಾ. ಆದ್ರೆ ರಿಯಲ್ ಲೈಫ್ ನಲ್ಲಿ ನಿಮಗೆ ನಿಧಾನವಾಗಿ ಹಾಡು ಹಾಕಲು ಕೂಡಾ ಧೈರ್ಯವಿರುವುದಿಲ್ಲ. ಒಂದು ವೇಳೆ ಸಿನಿಮಾ ತರಹ ಪಾರ್ಟಿ ಮಾಡಿದ್ರೆ ನೀವು ಖಂಡಿತ ಹಾಸ್ಟೆಲ್ ವಾರ್ಡನ್ ಬಳಿ ಕ್ಷಮೆ ಕೇಳುವಂತಾಗುವುದು.

ಯಶಸ್ವೀ ಕೆರಿಯರ್ ಲೈಫ್ ನಿಮ್ಮದಾಗಬೇಕಾದ್ರೆ ಬೆಳಗ್ಗೆ ಇದನ್ನ ನೀವು ಮಾಡಲೇ ಬೇಕು!

ಹುಡುಗಿಯರ ಹಾಸ್ಟೆಲ್ ಗೆ ಹುಡುಗರ ಲಗ್ಗೆ:

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನೀವು ನೋಡಿರುತ್ತೀರಿ. ಅದೊಂದು ಸಾಂಗ್ ನಲ್ಲಿ ರಕ್ಷಿತ್ ಶೆಟ್ಟಿ ಆಂಡ್ ಟೀಂ ರಶ್ಮಿಕಾ ಹಾಸ್ಟೆಲ್ ಗೆ ನುಗ್ಗಿ, ಹಾಡಿ, ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿರುವುದು. ಆದ್ರೆ ಇದೆಲ್ಲಾ ಬರೀ ಸಿನಿಮಾದಲ್ಲಿ ಮಾತ್ರ ಸಾಧ್ಯ. ರಿಯಲ್ ಲೈಫ್ ನಲ್ಲಿ ಹುಡುಗರು ಹಾಸ್ಟೆಲ್ ನತ್ತ ಮುಖ ಕೂಡಾ ಮಾಡದಷ್ಟು ಸ್ಟ್ರಿಕ್ಟ್ ಆಗಿರುತ್ತೆ ಹಾಸ್ಟೆಲ್ ಗಳು

ಸುಷ್ಮಿತಾ ಸೇನ್‌ನಂತಹ ಟೀಚರ್:

ಮೈ ಹೂ ನಾ ಸಿನಿಮಾ ನೀವೆಲ್ಲಾ ಹೆಚ್ಚಾಗಿ ನೋಡಿರುತ್ತೀರಾ. ಈ ಸಿನಿಮಾದಲ್ಲಿ ಸುಷ್ಮಿತಾ ಸೇನ್ ಟೀಚರ್ ಪಾತ್ರದಲ್ಲಿ ನಟಿಸಿರುವುದು ನಿಮಗೆ ಗೊತ್ತೇ ಇದೆ. ಸೆಕ್ಸಿ ಸೀರೆವುಟ್ಟು ತಳಕು, ಬಳಕು ಎಂದು ನಟಿಸಿರುವ ಸುಷ್ಮಿತಾ ರೋಲ್ ನಿಮಗೆ ಇಷ್ಟವಾಗದೇ ಇರುವುದಿಲ್ಲ. ಆದ್ರೆ ರಿಯಲ್ ಲೈಫ್ ಕಾಲೇಜಿನಲ್ಲಿ ಹಾಗಿರಲ್ಲ. ಹೆಚ್ಚಾಗಿ ಹಿರಿಯ ಶಿಕ್ಷಕರೇ ಅಥವಾ ವಿವಾಹಿತ ಸ್ಟ್ರಿಕ್ಟ್ ಶಿಕ್ಷಕರು ಇರುತ್ತಾರೆ

ನೀವು ಮಾಡುವ ಕೆಲಸದಲ್ಲಿ ಪ್ರೊಡಕ್ಟಿವಿ ಹೆಚ್ಚಿಸುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

English summary
Ever since saw Kuch Kuch Hota Hai, all used to tell everyone around, “Life will start only when college does.And one fine day, the college finally started and you know what? It was not at all as I had dreamt of watching Bollywood college life in Bollywood movies. Trust me college in reality is far different than that of Bollywood movies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more