ಗೂಗಲ್ ಗಮನಸೆಳೆದ ಸರ್ಕಾರಿ ಕಾಲೇಜು ಹುಡುಗ: ತಿಂಗಳಿಗೆ 12 ಲಕ್ಷ ರೂ ಸಂಬಳ

ಸ್ವಂತ ಪರಿಶ್ರಮದಿಂದಲೇ ಅತಿ ಚಿಕ್ಕವಯಸ್ಸಿಗೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ ಚಂಡೀಗಢದ ಹರ್ಷಿತ್. ತನ್ನ ಕನಸಿನ ಉದ್ಯೋಗ ಪಡೆದಿರುವ ಹರ್ಷಿತ್, ಗೂಗಲ್ ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಒಂದು ವರ್ಷದ ಅವಧಿಗೆ ತರಬೇತಿ ಪಡೆಯಲಿದ್ದಾನೆ.

ಗೂಗಲ್ ಸರ್ಚ್ ಇಂಜಿನ್ ಇಂಟರ್ನೆಟ್ ಲೋಕದ ದಿಗ್ಗಜ, ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಅದೆಷ್ಟೂ ಸಾಫ್ಟ್ ವೇರ್ ಇಂಜಿನಿಯರ್ ಗಳು ಈ ಕಂಪನಿಯಲ್ಲಿ ಕೆಲಸ ಪಡೆಯದೇ ಸೋತು ಹೋಗದ್ದಾರೆ. ಹೀಗಿರುವಾಗ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಚಂಡೀಗಢದ ವಿದ್ಯಾರ್ಥಿಯೊಬ್ಬ ಸರ್ಚ್ ಇಂಜಿನ್ ದೈತ್ಯ ಗೂಗಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.

ಸ್ವಂತ ಪರಿಶ್ರಮದಿಂದಲೇ ಅತಿ ಚಿಕ್ಕವಯಸ್ಸಿಗೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ ಚಂಡೀಗಢದ ಹರ್ಷಿತ್. ತನ್ನ ಕನಸಿನ ಉದ್ಯೋಗ ಪಡೆದಿರುವ ಹರ್ಷಿತ್, ಗೂಗಲ್ ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಒಂದು ವರ್ಷದ ಅವಧಿಗೆ ತರಬೇತಿ ಪಡೆಯಲಿದ್ದಾನೆ.

ಇದನ್ನ ಗಮನಿಸಿ:ಡಿಜಿಟಲ್ ದುನಿಯಾದಲ್ಲಿ ವೆಬ್ ಡಿಸೈನಿಂಗ್ ದರ್ಬಾರ್

ಹರ್ಷಿತ್ ಗ್ರಾಫಿಕ್ಸ್ ಗೆ ಗೂಗಲ್ ಫಿದಾ

ಸರ್ಕಾರಿ ಶಾಲೆಯಲ್ಲೇ ಎಸೆಸ್ಸೆಲ್ಸಿ ತನಕ ಓದಿರುವ ಹರ್ಷಿತ್ , ಗ್ರಾಫಿಕ್ ಡಿಸೈನಿಂಗ್ ನಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡು ಕಲಿತಿದ್ದಾನೆ.
ನನ್ನ ಅಂಕಲ್ ಒಬ್ಬರು ಸಾಫ್ಟ್ ವೇರ್ ಬಗ್ಗೆ ತಿಳಿಸಿಕೊಟ್ಟರು. ಯಾವುದೇ ಶಿಕ್ಷಣ ಸಂಸ್ಥೆಗೆ ಹೋಗಿ ನಾನು ಗ್ರಾಫಿಕ್‌ ಡಿಸೈನ್‌ ಕಲಿತಿಲ್ಲ ಎಂದು ಹರ್ಷಿತ್ ಹೇಳಿದ್ದಾನೆ.

ಆಗಸ್ಟ್ 7ರಂದು ಕ್ಯಾಲಿಫೋರ್ನಿಯಾಗೆ ಹೋಗಲಿದ್ದು, ಅಲ್ಲಿ ಗ್ರಾಫಿಕ್ ಡಿಸೈನ್ ಬಗ್ಗೆ ಒಂದು ವರ್ಷಗಳ ತರಬೇತಿ ಪಡೆಯಲಿದ್ದಾನೆ. ತರಬೇತಿಯ ವೇಳೆ 4 ಲಕ್ಷಗಳ ಸ್ಟೈಪೆಂಡ್ ಕೂಡ ಹರ್ಷಿತ್ ಗೆ ಸಿಗಲಿದೆ. ನಂತರ 12 ಲಕ್ಷ ರು ನಷ್ಟು ಸಂಬಳ ಪ್ರತಿ ತಿಂಗಳು ಪಡೆಯಲಿದ್ದಾನೆ.

ಹತ್ತನೇ ವಯಸ್ಸಿಗೆ ಗ್ರಾಫಿಕ್ಸ್ ಆಸಕ್ತಿ

ಗೂಗಲ್ ನಿಂದ ಭರ್ಜರಿ ಆಫರ್ ಪಡೆದಿರು ಹರ್ಷಿತ್ ತನ್ನ ಹತ್ತನೇ ವಯಸ್ಸಿನಲ್ಲೆ ಗ್ರಾಫಿಕ್ಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ, ಅಲ್ಲದೆ ಶಾಲಾದಿನಗಳಲ್ಲಿ ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್ ನಟ, ನಟಿಯರ ಚಿತ್ರಗಳ ಆಕರ್ಷಕ ಪೋಸ್ಟರ್ ವಿನ್ಯಾಸಗೊಳಿಸಿ ಸಾವಿರಾರು ರೂಗಳನ್ನು ಹರ್ಷಿತ್ ಸಂಪಾದಿಸುತ್ತಿದ್ದ.

ಇದನ್ನು ಗಮನಿಸಿ: ಆಧುನಿಕ ಮಾಧ್ಯಮದಲ್ಲಿ ಗ್ರಾಫಿಕ್ಸ್ ಎನ್ನುವ ಮೂರಕ್ಷರದ ಮೋಡಿ

ಹರ್ಷಿತ್ ಗೆ ಗೂಗಲ್ ನಲ್ಲಿ ಉದ್ಯೋಗ ಇರುವುದು ತಿಳಿದ ಕೂಡಲೇ ತಾನು ಮಾಡಿರುವ ಡಿಸೈನ್ ಗಳನ್ನು ಗೂಗಲ್ ಲಿಂಕ್ ಗೆ ಕಳುಹಿಸಿ ಅರ್ಜಿ ಹಾಕಿದ್ದಾನೆ. ಈತನ ಗ್ರಾಫಿಕ್ಸ್ ಗೆ ಮನಸೋತ ಗೂಗಲ್ ಜೂನ್ ತಿಂಗಳಿನಲ್ಲಿ ನೇಮಕಾತಿಯಾಗಿರುವ ಬಗ್ಗೆ ಪತ್ರವನ್ನು ಕಳುಹಿಸಿದೆ.

ಹರ್ಷಿತ್ ಗೂಗಲ್ ನಲ್ಲಿ ಉದ್ಯೋಗ ಪಡೆದಿರುವುದಕ್ಕೆ ಪೋಷಕರು, ಶಿಕ್ಷಕರು, ಸ್ನೇಹಿತರು ಸೇರಿದಂತೆ ಇಡೀ ಚಂಡೀಗಢವೇ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Chandigarh Class XII boy from govt school bags his dream job at Google. Harshit will receive training in graphic designing for a stipend of Rs 4 lakh per month. After completing training, he will get a remuneration of Rs 12 lakh per month.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X