ಆಸ್ಟ್ರೇಲಿಯ ವಿಕ್ಟೋರಿಯನ್ ಶಾಲೆಯಲ್ಲಿ ಕನ್ನಡ ಶಿಕ್ಷಣ

ಕರ್ನಾಟಕ ಶಾಲೆಗಳಲ್ಲಿ ಕನ್ನಡ ಕಾಣದಂತೆ ಕಳೆದುಹೋಗುತ್ತಿದೆ.. ಇಂದು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲು ಶಾಲೆಗಳು ಹಿಂದೇಟು ಹಾಕುತ್ತಿವೆ, ಹೀಗಿರುವಾಗ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಭಾಷಾ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

 

ಆಸ್ಟ್ರೇಲಿಯಾದ ಮೆಲ್ಬೊರ್ನ್ ಸರಕಾರಿ ಶಾಲೆಯೊಂದರಲ್ಲಿ 12ನೇ ತರಗತಿ ಪರೀಕ್ಷೆಗೆ ಎರಡನೇ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳಬಹುದಾಗಿದೆ. ಒಂದರಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಕನ್ನಡ ಕಲಿಯಬಹುದಾಗಿದೆ.

ಆಸ್ಟ್ರೇಲಿಯ ಶಾಲೆಯಲ್ಲಿ ಕನ್ನಡ

ಆಸ್ಟ್ರೇಲಿಯಾದ ವಿಕ್ಟೋರಿಯಾ ಸರಕಾರ ನಡೆಸುವ ಶಾಲೆಯಲ್ಲಿ ಎರಡನೇ ಭಾಷೆಯಾಗಿ ಕನ್ನಡ ಬೋಧಿಸಲಾಗುತ್ತದೆ. ಇದೇ ಜನವರಿಯಿಂದ ಕನ್ನಡ ತರಗತಿಗಳು ಆರಂಭವಾಗಲಿದ್ದು, ವಿಕ್ಟೋರಿಯನ್ ಸ್ಕೂಲ್ ಆಫ್ ಲಾಂಗ್ವೇಜಸ್ (ವಿಎಸ್ಎಲ್) ಮುಖಾಂತರ ಕನ್ನಡ ಭಾಷೆ ಕಲಿಸಲಾಗುತ್ತದೆ.

ಮೆಲ್ಬೊರ್ನ್ ನಲ್ಲಿ ಸಾಕಷ್ಟು ಕನ್ನಡಿಗರಿದ್ದು ನಮಗಾಗಿ ಶಾಲೆಯಲ್ಲಿ ಕನ್ನಡ ಕಲಿಕೆ ಆರಂಭಿಸಿ ಎಂದು ಮೆಲ್ಬೊರ್ನ್ ಕನ್ನಡ ಸಂಘದವರು ವಿಎಸ್ಎಲ್ ಗೆ ಪತ್ರ ಬರೆದಿದ್ದರು

 

ಬಿಜಾಪುರ ಸೈನಿಕ ಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕನ್ನಡಿಗರ ಬೇಡಿಕೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರಿರುವುದನ್ನು ಮನಗಂಡ ವಿಎಸ್ಎಲ್ ಕನ್ನಡ ಕಲಿಕೆಗೆ ಮನ್ನಣೆ ನೀಡಿದೆ.

ಇನ್ನು ಕನ್ನಡದಂತೆ ಮತ್ತೊಂದು ಪ್ರಾದೇಶಿಕ ಭಾಷೆಯಾದ ತೆಲುಗಿಗು ಬೇಡಿಕೆ ಬಂದಿದ್ದು, ಇದೇ ಶಾಲೆಯಲ್ಲಿ ತೆಲುಗು ಕಲಿಕೆಗೂ ಪ್ರಯತ್ನ ನಡೆಸಲಾಗುತ್ತಿದೆ.

ವಿಕ್ಟೋರಿಯನ್ ಸ್ಕೂಲ್ ಆಫ್ ಲಾಂಗ್ವೇಜಸ್

ವಿಕ್ಟೋರಿಯನ್ ಸ್ಕೂಲ್ ಆಫ್ ಲಾಂಗ್ವೇಜಸ್ (ವಿಎಸ್ಎಲ್) 1935 ರಲ್ಲಿ ಭಾಷೆಗಳ ಕಲಿಕೆಗಾಗಿಯೇ ಸ್ಥಾಪನೆಗೊಂಡ ಸರ್ಕಾರಿ ಶಾಲೆ. ಸುಮಾರು 80 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಶಾಲೆಯಲ್ಲಿ ನೇರ ಹಾಗೂ ದೂರದ ಶಿಕ್ಷಣದ ಮೂಲಕ ಶಿಕ್ಷಣ ನೀಡಲಾಗುತ್ತದೆ.
ಇಟಾಲಿಯನ್ ಮತ್ತು ಜಪಾನಿ ಭಾಷೆಗಳೊಂದಿಗೆ ಆರಂಭವಾದ ಈ ಶಾಲೆಯಲ್ಲಿ ಇಂದು ಸುಮಾರು 40 ಭಾಷೆಗಳನ್ನು ಬೋಧಿಸಲಾಗುತ್ತಿದೆ. ಸುಮಾರು 13,000 ವಿದ್ಯಾರ್ಥಿಗಳಿಗೆ ಮುಖಾಮುಖಿ ತರಗತಿಗಳಲ್ಲಿ ಮತ್ತು 1400 ವಿದ್ಯಾರ್ಥಿಗಳಿಗೆ ದೂರ ಶಿಕ್ಷಣದ ಮೂಲಕ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಇದನ್ನು ಗಮನಿಸಿ: ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
For the first time, schools run by the Victoria government in Australia are teaching Kannada, starting from January 2018. Students in Melbourne can now option for Kannada as their second language for their class 12 board examination.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X