ಜೆಇಇ ಪ್ರಮುಖ 2019 ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಪ್ರತೀ ವರ್ಷ ಇಂಜಿನೀಯರ್ ಆಗಬೇಕೆಂದು ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಗಾಗಿ ಕಾಯುತ್ತಾ ಇರುತ್ತಾರೆ

ಪ್ರತೀ ವರ್ಷ ಇಂಜಿನೀಯರ್ ಆಗಬೇಕೆಂದು ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಗಾಗಿ ಕಾಯುತ್ತಾ ಇರುತ್ತಾರೆ. ಈ ಮೊದಲು ಈ ಪರೀಕ್ಷೆ ವರ್ಷಕ್ಕೆ ಬರೀ ಒಂದು ಬಾರಿ ನಡೆಯುತ್ತಿತ್ತು. ಇದೀಗ ಹೆಚ್‌ಆರ್‌ಡಿ ಮಿನಿಸ್ಟ್ರಿಯು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪರಿಚಯಿಸುತ್ತಿದ್ದು, ಇನ್ನು ಮುಂದೆ ಜೆಇಇ ಪರೀಕ್ಷೆಯನ್ನ ಈ ಸಂಸ್ಥೆ ನಡೆಸಲಿದೆ ಹಾಗೆಯೇ ಈ ಪರೀಕ್ಷೆ ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ.

ಜೆಇಇ ಪ್ರಮುಖ 2019 ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಇತ್ತೀಚೆಗಷ್ಟೇ ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು, ಜೆಇಇ ಪ್ರಮುಖ 1 ಹಾಗೂ 2 ಪರೀಕ್ಷೆಯ ದಿನಾಂಕ ನಿಗಧಿಗೊಳಿಸಿದೆ. ಈ ಮೊದಲು ಈ ಪರೀಕ್ಷೆಯ ಹೊಣೆಯನ್ನ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಸಂಸ್ಥೆ ವಹಿಸಿಕೊಂಡಿತ್ತು.

<strong>also read: ಜೆಇಇ ಪ್ರಮುಖ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ</strong>also read: ಜೆಇಇ ಪ್ರಮುಖ ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ

ಜನವರಿ ತಿಂಗಳಿನಲ್ಲಿ ಜೆಇಇ ಪ್ರಮುಖ 1 ಪರೀಕ್ಷೆಯು ನಡೆಯಲಿದ್ದು, ಈಗಾಗಲೇ ಆನ್‌ಲೈನ್ ಅರ್ಜಿ ಭರ್ತಿಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಬಾರಿ ಮತ್ತೆ ತಮ್ಮ ಲಕ್ ಚೆಕ್ ಮಾಡಿಕೊಳ್ಳಬಹುದಾಗಿದೆ. ಇದೀಗ ರಿಜಿಸ್ಟ್ರೇಶನ್ ಪ್ರಕ್ರಿಯೆ ಬಗ್ಗೆ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಜೆಇಇ ಪ್ರಮುಖ ರಿಜಿಸ್ಟ್ರೇಶನ್ ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 2: ಎನ್‌ಟಿಎ ಎಕ್ಸಾಮ್ಸ್ ಅಡಿಯಲ್ಲಿ ಬರುವ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಜೆಇಇ ಪ್ರಮುಖ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭಿಸಲು ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಫಿಲ್ ಅಪ್ಲಿಕೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 6: ಫೋಟೋಗ್ರಾಫ್ ಮತ್ತು ಸಹಿಯನ್ನ ಅಪ್‌ಲೋಡ್ ಮಾಡಿ
  • ಸ್ಟೆಪ್ 7: ಅರ್ಜಿ ಶುಲ್ಕ ಪಾವತಿಸಿ
  • ಸ್ಟೆಪ್ 8: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 9: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

also read: ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

ಪರೀಕ್ಷೆಯ ಪ್ರವೇಶ ಪತ್ರವು ಡಿಸಂಬರ್ ತಿಂಗಳ ಮೂರನೇ ವಾರ ಸಿಗಲಿದೆ. ಹಾಗೂ ಜನವರಿ ೩೧ ರಂದು ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಗಳು ಇಂದಿನಿಂದಲೇ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭಿಸಿದ್ದು, ಸೆಪ್ಟಂಬರ್ ೩೦, ೨೦೧೮ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ:

ಜೆಇಇ ಪ್ರಮುಖ 1:

  • ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ರಿಂದ 30 , 2018
  • ಪ್ರವೇಶ ಪತ್ರ ಡೌನ್‌ಲೋಡ್: ಡಿಸಂಬರ್ 17, 2018
  • ಪರೀಕ್ಷೆ ದಿನಾಂಕ: ಜನವರಿ 6 ರಿಂದ 20, 2019
  • ಫಲಿತಾಂಶ ದಿನಾಂಕ: ಜನವರಿ 31, 2019

ಜೆಇಇ ಪ್ರಮುಖ 2:

  • ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 8 ರಿಂದ ಮಾರ್ಚ್ 7, 2019
  • ಪ್ರವೇಶ ಪತ್ರ ಡೌನ್‌ಲೋಡ್: ಮಾರ್ಚ್ 18, 2019
  • ಪರೀಕ್ಷೆ ದಿನಾಂಕ: ಎಪ್ರಿಲ್ 6 ರಿಂದ 20, 2019
  • ಫಲಿತಾಂಶ ದಿನಾಂಕ: ಎಪ್ರಿಲ್30,

also read: ಬರೀ ಡಾಕ್ಟರ್, ಇಂಜಿನೀಯರ್ ಮಾತ್ರವಲ್ಲ... ಈ ಕೋರ್ಸ್ ಕೂಡಾ ಮಾಡಿ ಬೆಸ್ಟ್ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು

For Quick Alerts
ALLOW NOTIFICATIONS  
For Daily Alerts

English summary
Every year, lakhs of budding engineers eagerly wait for the Joint Entrance Examination (JEE) which was earlier conducted once a year. The decision to hold the JEE Main twice a year got mixed reactions from the students.The HRD ministry has also introduced the National Testing Agency (NTA), which will be the organising body for JEE Main now onwards.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X