ಬರೀ ಡಾಕ್ಟರ್, ಇಂಜಿನೀಯರ್ ಮಾತ್ರವಲ್ಲ... ಈ ಕೋರ್ಸ್ ಕೂಡಾ ಮಾಡಿ ಬೆಸ್ಟ್ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು

12 ನೇ ತರಗತಿ ಪಾಸಾದ ಬಳಿಕ ಯಾವ ಕೋರ್ಸ್ ಮುಂದುವರೆಸುವುದು ಎಂದು ವಿದ್ಯಾರ್ಥಿಗಳಲ್ಲಿ ಮತ್ತು ಅವರ ಹೆತ್ತವರಲ್ಲಿ ಗೊಂದಲ ಶುರುವಾಗುತ್ತದೆ. ಇನ್ನು ನೀವು ವಿಜ್ಞಾನ ವಿಭಾಗದಲ್ಲಿ 12 ನೇ ತರಗತಿ ಪಾಸು ಮಾಡಿದ್ದರೆ, ನಿಮ್ಮ ದೃಷ್ಟಿ ಇಂಜಿನೀಯರ್ ಇಲ್ಲ ಎಂಬಿಬಿಎಸ್ ಕೋರ್ಸ್ ಮೇಲಿರುತ್ತದೆ. ಆದ್ರೆ ಈ ಕೋರ್ಸ್ ಕಂಟಿನ್ಯೂ ಮಾಡಲು ಹೆಚ್ಚು ಅಂಕ ಸ್ಕೋರ್ ಮಾಡಬೇಕು ಇಲ್ಲ ಸಿಕ್ಕಾಪಟ್ಟೆ ಹಣ ವ್ಯಯಿಸಬೇಕು. ಹಾಗಂತ ಬರೀ ಇವೆರಡೇ ಬೆಸ್ಟ್ ಕೋರ್ಸ್ ಗಳಿರುವುದು ಎಂದು ನೀವು ಅಂದು ಕೊಂಡಿದ್ದರೆ ನಿಮ್ಮ ಅನಿಸಿಕೆ ತಪ್ಪು.

ಬರೀ ಡಾಕ್ಟರ್, ಇಂಜಿನೀಯರ್ ಮಾತ್ರವಲ್ಲ... ಈ ಕೋರ್ಸ್ ಕೂಡಾ ಮಾಡಿ ಬೆಸ್ಟ್ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು

 

ನೀವು 12ನೇ ತರಗತಿಯಲ್ಲಿ ಸೈನ್ಸ್ ಸಬ್‌ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದು, ಮುಂದೆ ಡಾಕ್ಟರ್ ಇಲ್ಲ ಇಂಜಿನೀಯರ್ ಮಾತ್ರವಲ್ಲದೇ ಬೇರೆ ಯಾವೆಲ್ಲಾ ಬೆಸ್ಟ್ ಕೋರ್ಸ್ ಗಳನ್ನ ಮಾಡಿ ಬೆಸ್ಟ್ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು ಎಂದು ಇದೀಗ ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ:

also read: ನಿಮ್ಮ ಕೆಲಸ ಹೋಗಲು ಇವಿಷ್ಟು ಸಾಕು!

ಬ್ಯಾಚುಲರ್ ಆಫ್ ನರ್ಸಿಂಗ್:

ಹಳೆಯ ಪ್ರೊಫೆಶನಲ್ ಗಳಲ್ಲಿ ಇದು ಕೂಡಾ ಒಂದಾಗಿದೆ. ಇದು ಕೋರ್ಸ್ ನಲ್ಲಿ ಹೇಗೆ ಟ್ರೀಟ್ ಮೆಂಟ್ ನೀಡಬಹುದು ಎಂದು ಟ್ರೈನಿಂಗ್ ನೀಡಲಾಗುತ್ತದೆ. ಮೆಡಿಸನ್, ಡ್ರಗ್ಸ್ ಹಾಗೂ ರಿಸರ್ಚ್ ಸಂಬಂಧಿತ ಟ್ರೈನಿಂಗ್ ನೀಡಲಾಗುತ್ತದೆ. ಇನ್ನು ನರ್ಸಿಂಗ್ ಡಿಗ್ರಿ ಪಡೆಯಬೇಕೆಂದಿದ್ದರೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು.

ಬ್ಯಾಚುಲರ್ ಇನ್ ರೆಡಿಯೋಗ್ರಾಫಿ:

ಎಕ್ಸ್ ರೆ ಮೂಲಕ ರೋಗಗಳ ಡಯೋಗ್ನೊಸಿಸ್ ಮಾಡುವುದೇ ಈ ಹುದ್ದೆಯ ಮುಖ್ಯ ಲಕ್ಷಣ. ಮೂರು ವರ್ಷದ ಈ ಕೋರ್ಸ್ ನಲ್ಲಿ, ೬ ಸೆಮೆಸ್ಟರ್ ಗಳು ಇರುತ್ತದೆ. ಎಲ್ಲಾ ಪಾಥಾಲೋಜಿಕಲ್ ಸೆಂಟರ್ ಹಾಗೂ ಹಾಸ್ಪಿಟಲ್‌ಗಳಲ್ಲಿ ಬಹು ಬೇಡಿಕೆಯ ಪ್ರೊಫೆಶನ್ ಇದಾಗಿದೆ. ಇನ್ನು ಈ ಕೋರ್ಸ್ ಕಂಟಿನ್ಯೂ ಮಾಡಲು ಕೂಡಾ ನೀವು ಪ್ರವೇಶ ಪರೀಕ್ಷೆಯನ್ನ ಎದುರಿಸಬೇಕು.

also read: ನೀವು ಆಲಸಿಗಳೇ... ಹಾಗಿದ್ರೆ ಈ ಜಾಬ್ ನಿಮಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ!

ಒಪ್ಟೊಮೆಟ್ರಿಸ್ಟ್ :

ನೀವು ಬಯಾಲಾಜಿ ಸಬ್‌ಜೆಕ್ಟ್ ಒಳಗೊಂಡಂತೆ ೧೨ನೇ ತರಗತಿ ಪಾಸುಮಾಡಿದ್ರೆ ನೀವು ಒಪ್ಟೊಮೆಟ್ರಿಸ್ಟ್ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆಯ ಚಿಕಿತ್ಸೆ ಬಗ್ಗೆ ಈ ಕೋರ್ಸ್ ನಲ್ಲಿ ತಿಳಿಸಿಕೊಡಲಾಗುತ್ತದೆ. ಕಣ್ಣಿನ ಲೆನ್ಸ್, ಸ್ಪೆಕ್ಟಾಕಲ್ಸ್ ಗೆ ಸಂಬಂಧಪಟ್ಟಂತೆ ಪ್ರಾಥಮಿಕ ಚಿಕಿತ್ಸೆ, ಆಧುನಿಕ ತಂತ್ರಜ್ಞಾನ, ಕಣ್ಣಿಗೆ ಸಂಬಂಧಪಟ್ಟಂತಹ ಟೆಕ್ನಿಕಾಲಿಟೀಸ್ ಬಗ್ಗೆ ಈ ಕೋರ್ಸ್ ನಲ್ಲಿ ತಿಳಿಸಿಕೊಡಲಾಗುತ್ತದೆ.

 

ಬ್ಯಾಚುಲರ್ ಆಫ್ ಫಾರ್ಮಾಸಿ:

ಇದು ನಾಲ್ಕು ವರ್ಷದ ಕೋರ್ಸ್ ಆಗಿದೆ. ರಾಜ್ಯಮಟ್ಟದಲ್ಲಿ ನಡೆಯುವ ಎಂಟ್ರೇಂಸ್ ಪರೀಕ್ಷೆ ಮೂಲಕ ನೀವು ಕೋರ್ಸ್ ಗೆ ಸೀಟು ಪಡೆಯಬಹುದಾಗಿದೆ. 24 ಗಂಟೆ ಕೆಲಸ ಮಾಡಲು ಫಾರ್ಮಾಸಿಸ್ಟ್ ತಯಾರಿರಬೇಕು ಹಾಗೂ ಪ್ರ್ಯಾಕ್ಟೀಲ್ ಎಕ್ಸ್‌ಪಿರೀಯೆನ್ಸ್ ಬಳಿಕ ಇವರು ತಮ್ಮದೆ ಆದ ಸ್ವಂತ ಔಷಧ ಮಳಿಗೆ ಇಟ್ಟುಕೊಳ್ಳಬಹುದು.

also read: ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

For Quick Alerts
ALLOW NOTIFICATIONS  
For Daily Alerts

English summary
Completion of higher secondary sometimes put you in a deep anxiety, especially who have completed their 12th in science but want to do something career perspective and has nothing to do with the typical engineering and medical science courses
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X