ಯುಪಿಎಸ್‌ಸಿ: ಭಾರತದಲ್ಲಿ ಕನ್ನಡಿಗರೇ ಸಾರ್ವಭೌಮರು

Posted By:

ಕೇಂದ್ರ ಲೋಕಸೇವಾ ಆಯೋಗವು 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶವನ್ನು ಬುಧವಾರ ರಾತ್ರಿ ಪ್ರಕಟಿಸಿದ್ದು, ಕೋಲಾರ ಜಿಲ್ಲೆಯ ಕೆ.ಆರ್‌. ನಂದಿನಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.ರಾಜ್ಯದ 36 ಅಭ್ಯರ್ಥಿಗಳು ರ‍್ಯಾಂಕ್ ಪಡೆದವರ ಪಟ್ಟಿಯಲ್ಲಿದ್ದು ಕನ್ನಡಿಗರೇ ಸಾರ್ವಭೌಮರಾಗಿದ್ದಾರೆ.

ದೇಶಕ್ಕೆ ಪ್ರಥಮ ಕೋಲಾರದ ನಂದಿನಿ ಕೆ.ಆರ್

ಕೋಲಾರ ಮೂಲದ ನಂದಿನಿ ಅವರು ಕಳೆದ ಬಾರಿ ನಡೆದ ಯುಪಿಎಸ್ ಪರೀಕ್ಷೆ 625ನೇ ರ್ಯಾಂಕ್ ಪಡೆಯುವ ಮೂಲಕ ಐಆರ್ ಎಸ್ ಸೇವೆ ಆಯ್ಕೆ ಮಾಡಿಕೊಂಡಿದ್ದು, ಪ್ರಸ್ತುತ ಫರಿದಾಬಾದ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಎರಡನೇ ಪ್ರಯತ್ನದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. [ಕನ್ನಡತಿ ನಂದಿನಿ ಸಾಧನೆ]

ಯುಪಿಎಸ್‌ಸಿ ಕನ್ನಡಿಗರ ಸಾಧನೆ

ಈ ಸಾಧನೆ ಮಾಡಿದ ಎರಡನೇ ಕನ್ನಡತಿ ಈ ಹಿಂದೆ ವಿಜಯಲಕ್ಷ್ಮೀ ಬಿದರಿ ಹೊರತು ಪಡಿಸಿದರೆ ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳು ಯಾರೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಇದೀಗ ನಂದಿನಿ ಮೇರು ಸಾಧನೆ ಮಾಡಿದ 2ನೇ ಕನ್ನಡಿಗರೆನಿಸಿದ್ದಾರೆ.

ಗುಲ್ಬರ್ಗದ ಶೇಖ್ ತನ್ವೀರ್ ಆಸಿಫ್ 25ನೆ ರ್ಯಾಂಕ್

2016ನೆ ಸಾಲಿನ ಕೇಂದ್ರ ಲೋಕಸೇವಾ ಆಯೋಗ (​ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಗುಲ್ಬರ್ಗದ ಶೇಖ್ ತನ್ವೀರ್ ಆಸಿಫ್ 25ನೆ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ, ಗುಲ್ಬರ್ಗದ ನೋಬೆಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದ ತನ್ವೀರ್ ಆಸಿಫ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು.

ಯುಪಿಎಸ್‌ಸಿ ಕನ್ನಡಿಗರ ಸಾಧನೆ

ಬಂಟ್ವಾಳದ ನವೀನ್‌ಭಟ್‌ಗೆ 37ನೇ ರ್‍ಯಾಂಕ್‌

ಬಂಟ್ವಾಳ: ಯುಪಿಎಸ್‌ಸಿ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬಂಟ್ವಾಳದ ನವೀನ್‌ಭಟ್‌ 37ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ. ಬಂಟ್ವಾಳ ತಾಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉಮೇಶ್‌ ಭಟ್‌ ಪುತ್ರ ನವೀನ್‌ ಭಟ್‌ ಮೂಲತಃ ಉಡುಪಿ ಎಲ್ಲೂರಿನವರು. 2009ರ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್‌ ಪಡೆದಿದ್ದ ಅವರು ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪೂರ್ಣಗೊಳಿಸಿದ್ದರು.

ಯುಪಿಎಸ್‌ಸಿ ಕನ್ನಡಿಗರ ಸಾಧನೆ

ಶಿವಮೊಗ್ಗದ ಧ್ಯಾನಚಂದ್ರಗೆ 47ನೇ ರ್ಯಾಂಕ್

ಯುಪಿಎಸ್ಸಿ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಶಿವಮೊಗ್ಗದ ಎಚ್‌.ಎಂ. ಧ್ಯಾನಚಂದ್ರ 47 ಸ್ಥಾನ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಧ್ಯಾನ ಚಂದ್ರ 2016ರಲ್ಲಿ ಕೆಎಎಸ್‌ ಕೂಡ ಬರೆದಿದ್ದು, ಅದರಲ್ಲಿ ಆಯ್ಕೆಯಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಆಯ್ಕೆಯಾಗಿದ್ದರು

ರ್ಯಾಂಕ್ ವಿಜೇತರು

ಕಲಬುರಗಿಯ ಶೇಖ್‌ ತನ್ವೀರ್‌ ಆಸೀಫ್-25, ಬಂಟ್ವಾಳದ ವೈ. ನವೀನ್‌ ಭಟ್‌-37, ಶಿವಮೊಗ್ಗದ ಎಚ್‌.ಎಂ. ಧ್ಯಾನ್‌ಚಂದ್ರ-47, ರಿಜ್ವಾನ್‌ ಭಾಷಾ ಶೇಖ್‌-48, ತುಮಕೂರಿನ ಮಧುಗಿರಿ ತಾಲೂಕಿನ ಈಜಿಹಳ್ಳಿಯ ಜಿ. ಪ್ರಿಯಾಂಕ-84 (ಮೊದಲ ಪ್ರಯತ್ನ), ಚಿತ್ರದುರ್ಗದ ಬಿ. ನಿಖೀಲ್‌-107, ರಂಜನ ಆರ್‌ ಶೆಣೈ-112, ಅಮೋಗ್‌ ಗೋಪಾನಾಥ್‌-171, ಪರಪ್ಪನ ಹಳ್ಳಿ ಕೆ.ಜೆ.ಪ್ರವೀಣ್‌ ಕುಮಾರ್‌-173, ಬಿ.ರತನ್‌-178, ಕೋಲಾರದ ಡಿ.ಸ್ನೇಹ-283, ಹುಬ್ಬಳ್ಳಿಯ ಫ‌ಕೀರೇಶ್‌ ಕಲ್ಲಪ್ಪ ಬಾದಾಮೈ 269, ಮೈಸೂರಿನ ಕೆಂಪಹೊನ್ನಯ್ಯ-340(ಅಂಧ ಅಭ್ಯರ್ಥಿ), ಅಮರೇಶ್ವರ ಪಾಟೀಲ್‌-376, ಮಂಡ್ಯದ ಸಿ.ಪಿ.ನಿಮಿಷಾಂಬ-386, ಕೊಪ್ಪಳದ ಎಚ್‌.ವಿನೋದ್‌ ಪಾಟೀಲ್‌-402, ವಿಜಯ ವಿ. ನಾಯಕ್‌ -421, ಎಸ್‌.ಆಕಾಶ್‌ -453, ಪಿ ವಿ. ಬೈರಪ್ಪ-475, ನಿತಿನ್‌ರಾಜ್‌ ಟಿಎನ್‌-476, ಸಾಹಿತಿ ಕೇಶವ ರೆಡ್ಡಿ ಹಂದ್ರಾಳ ಅವರ ಪುತ್ರ ಸಿರಿವೆನ್ನೆಲ-560, ಬಿ.ಜೆ.ಹರ್ಷವರ್ಧನ-598, ಚಿತ್ರದುರ್ಗದ ಪಿ.ಶಬರೀಶ್‌-617, ಸುಖಪುತ್ರ ಎನ್‌.-657, ಕೊಪ್ಪಳದ ಬಿ.ಜಗದೀಶ್‌-678, ಬೆಂಗಳೂರಿನ ಜಿ. ವಿನೀತ್‌-693, ವಿಜಯಪುರದ ಅಜಯ್‌ ಬಿಡರಿ-768, ಬೆಂಗಳೂರಿನ ಬಿ. ಗೋಪಾಲಕೃಷ್ಣ-787, ಬೆಂಗಳೂರಿನ ಸಂತೋಷ್‌ ಭೀಮಯ್ಯ-840, ಪ್ರಮೋದ್‌- 923, ಎನ್‌. ನಯನ- 1036, ಕೋಲಾರದ ಎಸ್‌.ಶಶಿಕಿರಣ್‌-1090, ರ್ಯಾಂಕ್ ಪಡೆದಿದ್ದಾರೆ.

ಇದನ್ನು ಗಮನಿಸಿ: ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: 1099 ಅಭ್ಯರ್ಥಿಗಳು ಆಯ್ಕೆ

English summary
The Union Public Service Commission (UPSC) on Wednesday declared the results civil services examination. KR Nandini has been declared the topper and 36 candidates clears the examination

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia