ಪ್ರಾಣಿ ಪ್ರಿಯರು ನೀವಾಗಿದ್ದರೆ ಈ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು

By Kavya

ಜಗತ್ತಿನಲ್ಲಿ ಒಬ್ಬರಿಗೂ ಕೆಡುಕು ಬಯಸದೇ ಇರುವವರು ಅಂದ್ರೆ ಅದು ಪ್ರಾಣಿ ಪಕ್ಷಿಗಳು. ಅ ಮೂಕ ಪ್ರಾಣಿಗಳೆಂದ್ರೆ ಕೆಲವರು ಭಯ ಪಡುತ್ತಾರೆ, ಇನ್ನು ಕೆಲವರು ತಾತ್ಸಾರ ಭಾವನೆಯಿಂದ ನೋಡಿದ್ರೆ ಮತ್ತೆ ಕೆಲವರು ತಮ್ಮ ಮನೆ ಮಕ್ಕಳಂತೆ ಪ್ರೀತಿಯಿಂದ ಸಾಕಿ ಸಲಹುತ್ತಾರೆ.

ಪ್ರಾಣಿ ಪ್ರಿಯರು ನೀವಾಗಿದ್ದರೆ ಈ ಕೆರಿಯರ್ ನಿಮ್ಮದಾಗಿಸಿಕೊಳ್ಳಬಹುದು

 

ಪ್ರಾಣಿ ಪ್ರಿಯರಿಗೆ ಯಾವ ಜಾಬ್ ಬೆಸ್ಟ್ ಎಂದು ಇವತ್ತು ನಾವು ನಿಮಗೆ ತಿಳಿಸಿಕೊಡುತ್ತೇವೆ. ಪ್ರಾಣಿ ಪಕ್ಷಿಗಳಿಗೆ ಸಂಬಂಧಪಟ್ಟ ಈ ವೃತ್ತಿಯನ್ನ ನಿಮ್ಮ ಕೆರಿಯರ್ ಆಗಿಸಿಕೊಂಡ್ರೆ ನಿಜಕ್ಕೂ ನಿಮ್ಮ ಹುದ್ದೆ ಬೆಸ್ಟ್ ಹುದ್ದೆಯಾಗಿರುತ್ತದೆ. ಆ ಹುದ್ದೆಗಳ ಲಿಸ್ಟ್ ಇಲ್ಲಿ ನೀಡಲಾಗಿದ್ದು, ಮುಂದಕ್ಕೆ ಓದಿಕೊಳ್ಳಿ.

ಗ್ರೂಮರ್

ಗ್ರೂಮರ್

ಪ್ರಾಣಿಗಳನ್ನ ಚೆನ್ನಾಗಿ ಕಾಣುವಂತೆ ಹಾಗೂ ಅವುಗಳನ್ನ ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸ ಗ್ರೂಮರ್ ಗಳದ್ದಾಗಿರುತ್ತದೆ. ಪಶು ವೈದ್ಯರ ಬಳಿಕ ಪ್ರಾಣಿಗಳನ್ನ ಚೆನ್ನಾಗಿ ಆರೈಕೆ ಮಾಡುವವರು ಯಾರು ಎಂದ್ರೆ ಅದು ಗ್ರೂಮರ್ ಗಳು. ಇವರು ಪ್ರಾಣಿಗಳ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೆ ಹಾಗೂ ಪ್ರಾಣಿಗಳ ಆರೈಕೆ ಮಾಡುವುದು ಇವರ ಮೊದಲ ಕರ್ತವ್ಯವಾಗಿರುತ್ತದೆ. ಇನ್ನು ವಿದೇಶಗಳಲ್ಲಿ ಈ ವೃತ್ತಿಯಿಂದ ಗ್ರೂಮರ್ಸ್ ಅತೀ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಆದ್ರೆ ಭಾರತದಲ್ಲಿ ಈ ಹುದ್ದೆ ಕೇವಲ ಲಿಮಿಟೆಡ್ ಹುದ್ದೆಯಾಗಿದೆ.

More Read: ಡಾಕ್ಟರ್, ಇಂಜಿನೀಯರ್ ಮಾತ್ರವಲ್ಲ ಈ ವಿಶೇಷ ವೃತ್ತಿಗಳಿಂದಲೂ ನೀವು ಕೈ ತುಂಬಾ ಸಂಪಾದಿಸಬಹುದು

ಪೆಟ್ ಸಿಟ್ಟರ್ ಮತ್ತು ಡಾಗ್ ವಾಕರ್

ಪೆಟ್ ಸಿಟ್ಟರ್ ಮತ್ತು ಡಾಗ್ ವಾಕರ್

ಪ್ರಾಣಿಗಳ ಮಾಲೀಕರಿಗೆ ಎಲ್ಲಿಯಾದ್ರೂ ವೆಕೇಶನ್ ತೆರಳಲು ಇದ್ದಾಗ ಅವರು ತಮ್ಮ ಶ್ವಾನ ಅಥವಾ ಇನ್ನಿತ್ತರ ಸಾಕು ಪ್ರಾಣಿಗಳನ್ನ ಪೆಟ್ ಸಿಟ್ಟರ್ ಗಳಲ್ಲಿ ನೀಡುತ್ತಾರೆ. ಪೆಟ್ ಸಿಟರ್ ಗಳಲ್ಲಿ ಕೆಲಸ ಮಾಡುವವರು ತಮ್ಮ ಸಂಪೂರ್ಣ ಗಮನವನ್ನ ಪ್ರಾಣಿಗಳ ಮೇಲೆ ನೀಡಬೇಕಾಗುತ್ತದೆ. ಅವುಗಳಿಗೆ ಟೈಂ ಟು ಟೈಂ ಫುಡ್ ನೀಡುವುದರ ಜತೆಗೆ ವಾಕಿಂಗ್ ಗೂ ಕರೆದುಕೊಂಡು ಹೋಗಬೇಕು. ಇನ್ನು ಈ ವೃತ್ತಿ ಅಮೇರಿಕಾದಲ್ಲಿ ಸಖತ್ ಫೇಮಸ್ ಕೂಡಾ ಆಗಿದೆ. ಅಮೇರಿಕಾದಲ್ಲಿ ಬರೀ ಶ್ವಾನ ಅಥವಾ ಬೆಕ್ಕುಮಾತ್ರವಲ್ಲದೇ ಪಕ್ಷಿಗಳನ್ನ ಕೂಡಾ ಪೆಟ್ ಸಿಟ್ಟರ್ ನಲ್ಲಿ ಬಿಟ್ಟು ಹೋಗುತ್ತಾರೆ.

ಟ್ರೈನರ್
 

ಟ್ರೈನರ್

ಪ್ರಾಣಿಗಳಿಗೂ ಟ್ರೈನರ್ ಇರುತ್ತಾರೆ. ಇವರು ಸ್ಪೇಶಲ್ ಟಾಸ್ಕ್ ಗೆ ಹೇಗೆ ಪರ್ಪೋಮ್ ಮಾಡುವುದು ಮುಂತಾದ ಚಟುವಟಿಕೆಗಳ ಬಗ್ಗೆ ಟ್ರೈನಿಂಗ್ ನೀಡಿತ್ತಾರೆ. ಇದರಿಂದ ಪ್ರಾಣಿಗಳು ನಮಗೂ ಕೂಡಾ ಸಹಾಯ ಮಾಡುವಂತಾಗುತ್ತದೆ. ಹಾಗೂ ಈ ಟ್ರೈನಿಂಗ್ ನಿಂದ ಪ್ರಾಣಿಗಳಿಗೆ ಮನುಷ್ಯರ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಇನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಟ್ರೈನರ್ಸ್ ಗಳಿಗೆ ಬೆಸ್ಟ್ ಸ್ಯಾಲರಿ ಕೂಡಾ ಸಿಗುತ್ತದೆ

More Read: ಇತ್ತೀಚೆಗಿನ ಯುವಜನತೆಗೆ ಕೈ ತುಂಬಾ ಸಂಪಾದಿಸಲು ಯೂನಿಕ್ ಕೆರಿಯರ್ ಆಯ್ಕೆಗಳು!

ಬ್ರೀಡರ್

ಬ್ರೀಡರ್

ಪ್ರಾಣಿಗಳ ಬ್ರೀಡ್ ಗೆ ಸಂಬಂಧಪಟ್ಟಂತೆ ಬ್ರೀಡರ್ ಗಳನ್ನ ಸೆಲೆಕ್ಟ್ ಮಾಡಲಾಗುತ್ತದೆ. ಇನ್ನು ನೀವು ಯುಎಸ್ ದೇಶಗಳಲ್ಲಿ ಬ್ರೀಡರ್ ವೃತ್ತಿ ಪ್ರಾರಂಭಿಸಬೇಕೆಂದಿದ್ದರೆ ಕನಿಷ್ಟ ಹೈಸ್ಕೂಲ್ ಶಿಕ್ಷಣವಾದ್ರೂ ಪಡೆದಿರಬೇಕು. ಅಷ್ಟೇ ಅಲ್ಲ ಈ ವೃತ್ತಿ ಪ್ರಾರಂಭಿಸುವ ಮುನ್ನ ಶಾರ್ಟ್ ಟರ್ಮ್ ಟ್ರೈನಿಂಗ್ ಕೂಡಾ ಮಾಡಬೇಕಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
If there is any innocence left in the world, means that is only animals. So we all want to help them but when it comes to put our thoughts to action, we tend to back off. animal lovers choose professions that allows them to help animals or their works revolve around them.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X