ಇಂಜಿನೀಯರ್ಸ್ ಅಲ್ಲ ಸರ್ಕಾರಿ ನೌಕರರೂ ಅಲ್ಲ... ಆದ್ರೆ ಅವರಿಗಿಂತಲೂ ಹೆಚ್ಚು ಸಂಪಾದಿಸುತ್ತಾರೆ!

ನಾವು ಬಯಸೋ ವಸ್ತು ನಮ್ಮ ಕಾಲಿನ ಬುಡಕ್ಕೆ ಬಂದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ... ಟ್ರಾಫಿಕ್ ಮಧ್ಯೆ ಎದ್ದು ಬಿದ್ದು ಹೋಗಿ ಕೊನೆಗೆ ತಮಗೆ ಬೇಕಾದ ವಸ್ತುಗಳನ್ನ ಖರೀದಿಸಿ ಮನೆಗೆ ತರುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಇದೀಗ ಆ ಕೆಲಸವನ್ನ ಮತ್ತಷ್ಟು ಸುಲಭವಾಗಿ ಮಾಡಿ ಬಿಡುತ್ತಾರೆ ಡೆಲಿವರಿ ಬಾಯ್ಸ್.

ಇಂಜಿನೀಯರ್ಸ್ ಅಲ್ಲ ಸರ್ಕಾರಿ ನೌಕರರೂ ಅಲ್ಲ... ಆದ್ರೆ ಅವರಿಗಿಂತಲೂ ಹೆಚ್ಚು ಸಂಪಾದಿಸುತ್ತಾರೆ!

 

ಇದೀಗ ಗ್ರಾಹಕರಿಗೆ ತಮಗೆ ಬೇಕಾದ ವಸ್ತುಗಳನ್ನ ಮನೆಗೆ ತಂದು ಕೊಡುವ ಬ್ಯುಸಿನೆಸ್ ಪ್ರಾರಂಭವಾಗಿದೆ. ಸ್ವೀಗಿ, ಜೊಮಾಟೋ ಮತ್ತು ಊಬರ್ ಈಟರ್ಸ್ನಂತಹ ಫುಡ್ ಎಗ್ರಿಗೇಟರ್ಸ್ ಇದೀಗ ತಮ್ಮ ಡೆಲಿವರಿ ಕೆಲಸದಿಂದ ದ್ವಿಗುಣ ಹಣ ಸಂಪಾದಿಸುತ್ತಿದ್ದಾರೆ ಕೂಡಾ. ನಿಮಗೆ ಈ ಮಾತು ಕೇಳಿದ್ರೆ ಆಶ್ಚರ್ಯವಾಗಬಹುದು ಹಿಂದೆ 18 ರಿಂದ 20 ಸಾವಿರ ರೂ ದುಡಿಯುತ್ತಿದ್ದ ಡೆಲಿವರಿ ಬಾಯ್ಸ್ ಇದೀಗ ತಿಂಗಳಿಗೆ 40 ರಿಂದ 50 ಸಾವಿರ ರೂ ವರೆಗೆ ದುಡಿಯುತ್ತಾರೆಯಂತೆ.

ಇದನ್ನೂ ಕೂಡಾ ಓದಿ : ಸಕ್ಸಸ್ ಫುಲ್ ವ್ಯಕ್ತಿಗಳು ಒಂದೇ ತೆರನಾದ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಾರೆ... ಕಾರಣ ಗೊತ್ತಾ!

ಡೆಲಿವರಿ ಬಾಯ್ ಅವರ ಹೆಚ್ಚಿದ ವೇತನ:

ಮೂಲಗಳ ಪ್ರಕಾರ ಫುಡ್ ಡೆಲಿವರಿ ಮಾಡುವ ಕಂಪನಿಯು, ಡೆಲಿವರಿ ಬಾಯ್‌ಗೆ ಶೇ 60 ರಷ್ಟು ಪ್ರಮಾಣದಲ್ಲಿ ವೇತನ ನೀಡುತ್ತದೆಯಂತೆ. ಜೊಮಾಟೋ ಹಾಗೂ ಸ್ವೀಗಿ ಕಳೆದ ಮೂರು , ನಾಲ್ಕು ತಿಂಗಳುಗಳಲ್ಲಿ ತಮ್ಮ ಡೆಲಿವರಿ ಬಾಯ್‌ಗಳಿಗೆ ನೀಡುವ ವೇತನದಲ್ಲಿ ಶೇ.60 ರಿಂದ ಇದೀಗ ಶೇ 120 ರವರೆಗೆ ಏರಿಸಿದೆಯಂತೆ. ಇನ್ನು ಮಳೆಯಲ್ಲಿ ಹೋಗಿ ಫುಡ್ ಡೆಲಿವರಿ ಮಾಡುವ ಡೆಲಿವರಿ ಬಾಯ್‌ಗಳಿಗೆ ಇಂಸೆಟಿವ್ಸ್ ಕೂಡಾ ನೀಡಲಾಗುತ್ತಿಯಂತೆ.

ಫಿಲ್ಪ್ ಕಾರ್ಟ್ , ಅಮೇಜಾನ್ ಮತ್ತು ಬಿಗ್‌ಬಾಸ್ಕೆಟ್ ನಂತಹ ಕಾಮರ್ಸ್ ವೆಬ್‌ಸೈಟ್ ಡೆಲಿವರಿ ಬಾಯ್ ಗಳ ಮೇಲೆಯೂ ಫುಡ್ ಡೆಲಿವರಿ ಕಂಪನಿಗಳ ಪರಿಣಾಮ ಬೀರಿದೆ. ಇವರಿಗೂ ಕೂಡಾ ತಿಂಗಳಿಗೆ 16 ರಿಂದ 18 ಸಾವಿರ ವೇತನದ ಜತೆ ಇಂಸೆಟಿವ್ಸ್ ಸಿಗುತ್ತಿದೆ. ಬೈಕುಗಳಲ್ಲಿ ಆರ್ಡರ್ ತೆಗೆದುಕೊಂಡು ಬರುವ ವಿತರಣಾ ಹುಡುಗರಿಗೆ ಫುಡ್ ಎಗ್ರಿಗೇಟರ್ಸ್ ಕೂಡಾ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ.

ಇದನ್ನೂ ಕೂಡಾ ಓದಿ :ಮನೆಯಲ್ಲಿ ಕುಳಿತು ಕೆಲಸ ಮಾಡುವುದಾದ್ರೆ ಇವೆಲ್ಲಾ ಬೆಸ್ಟ್ ಜಾಬ್ ಗಳು... ಕೈ ತುಂಬಾ ಸಂಪಾದನೆ ಕೂಡಾ!


ಇದೀಗ ಫಿಲ್ಪ್ ಕಾರ್ಟ್ , ಅಮೇಜಾನ್ ಮತ್ತು ಬಿಗ್‌ಬಾಸ್ಕೆಟ್ ನಂತಹ ದೊಡ್ಡ ದೊಡ್ಡ ಕಂಪನಿಯ ಡೆಲಿವರಿ ಬಾಯ್ಸ್ ಬೇರೆ ಕಂಪನಿಗಳಿಗೆ ಉದ್ಯೋಗಕ್ಕೆ ಹೋದಾಗ ಹೆಚ್ಚಿನ ಸ್ಯಾಲರಿ ಪ್ಯಾಕೇಜ್ ಪಡೆಯುತ್ತಿದ್ದಾರೆ. ಸ್ವೀಗಿ ಮತ್ತು ಜೊಮಾಟೋ ಎರಡು ಕಂಪನಿಗಳು ತಮ್ಮ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಜನವರಿ ತಿಂಗಳಿನಲ್ಲಿ ಸ್ವೀಗಿ ಜತೆ 30 ಸಾವಿರ ಡೆಲಿವರಿ ಬಾಯ್ಸ್ ಗಳು ಇದ್ದರು ಇದೀಗ ಅವರ ಸಂಖ್ಯೆ 55 ಸಾವಿರಕ್ಕೆ ಏರಿದೆ. ಅದೇ ಜೊಮಾಟೋದಲ್ಲಿ ಜನವರಿ ತಿಂಗಳಿನಲ್ಲಿ 1800 ಡೆಲಿವರಿ ಬಾಯ್ಸ್ ಗಳಿದ್ದು, ಇದೀಗ ಇವರ ಸಂಖ್ಯೆ 50 ಸಾವಿರಕ್ಕೆ ಏರಿದೆ.

ಡೆಲಿವರಿ ಬಾಯ್ ಹಾಗೂ ಡೆಲಿವರಿ ಪಾರ್ಟ್ನರ್ :

ಜೊಮಾಟೋ ಕಂಪನಿ ಬಳಿ ಇದೀಗ ಸುಮಾರು 50 ಸಾವಿರ ಡೆಲಿವರಿ ಬಾಯ್ಸ್ ಗಳಿದ್ದು, ವರ್ಷದ ಕೊನೆಗೆ ಇವರ ಸಂಖ್ಯೆ ಪ್ರತಿಶತ 60ಕ್ಕೆ ಏರಿಸಲಾಗುವುದು. ಹಾಗೂ ಜೊಮಾಟೋ ತಮ್ಮ ವರ್ಕರ್ಸ್ ಗೆ ಎಷ್ಟು ಸಂಬಳ ನೀಡಲಾಗುತ್ತದೆ ಎಂಬುವುದು ಇನ್ನೂ ಬಹಿರಂಗಗೊಳಿಸಿಲ್ಲ.

ಇದನ್ನೂ ಕೂಡಾ ಓದಿ :ಕಾರ್ಪೋರೇಟಿವ್ ವರ್ಲ್ಡ್‌ನಲ್ಲಿ ಹೇಗೆ ಇದ್ರೆ ಬೆಸ್ಟ್.... ಸಕ್ಸಸ್ ಸ್ಟೆಪ್ ಹತ್ತಬೇಕಾದ್ರೆ ಇದನ್ನೆಲ್ಲಾ ಅವಾಯ್ಡ್ ಮಾಡಿ!

ಇನ್ನು ಸ್ವೀಗಿ ಈ ಫೀಲ್ಡ್‌ನಲ್ಲಿ ತನ್ನ ಬ್ಯುಸಿನೆಸ್ ಇನ್ನೂ ವಿಸ್ತಿರಿಸುವ ಆಲೋಚನೆಯಲ್ಲಿದೆ. ಮುಂದಿನ 6 ರಿಂದ 9 ತಿಂಗಳೊಳಗೆ ಡೆಲಿವರಿ ಬಾಯ್ಸ್ ಸಂಖ್ಯೆ 1 ಲಕ್ಷಕ್ಕೆ ಏರಿಸುವ ಆಲೋಚನೆಯಲ್ಲಿದೆ. ಬೆಂಗಳೂರು, ಹೈದ್ರಾಬಾದ್, ಪುಣೆ ಮತ್ತು ದೆಹಲಿಯಂತಹ ಮಹಾ ನಗರಗಳಲ್ಲಿ, ಸ್ವೀಗಿ ಮತ್ತು ಜೊಮಾಟೋದಲ್ಲಿ ಫುಡ್ ಡೆಲಿವರಿ ಮಾಡುವುದಕ್ಕೆ 80 ರಿಂದ 120 ರೂ ವರೆಗೆ ಇಂಸೆಟಿವ್ಸ್ ಕೂಡಾ ಸಿಗುತ್ತದೆ. ಮೊದಲು 40 ರಿಂದ 50 ರೂ ಸಿಗುತಿತ್ತು.

 

ಈಗ ನೀವು ಯೋಚಿಸಿ, ನಿಮ್ಮ ಮನೆಗೆ ಫುಡ್ ಇಲ್ಲ ಯಾವುದೇ ವಸ್ತುಗಳನ್ನ ತರುವ ಡೆಲಿವರಿ ಬಾಯ್ಸ್ ನಿಮಗಿಂತ ಹೆಚ್ಚು ದುಡಿಯುತ್ತಾನೆ ಅಲ್ವಾ... ಇನ್ನು ಫುಡ್‌ ಕಂಪನಿಗಳು. ಡೆಲಿವವರಿ ಬಾಯ್ಸ್ ಗೆ ಇಷ್ಟು ವೇತನ ನೀಡುತ್ತಿದೆ ಅಂದ್ರೆ ಅದು ಒಳ್ಳೆಯ ಮಾತು ಕೂಡಾ. ಯಾಕೆಂದ್ರೆ ಅಷ್ಟೇ ಡೆಲಿವರಿ ಬಾಯ್‌ಗಳು ಅಷ್ಟೇ ಶ್ರಮ ಕೂಡಾ ಪಡುತ್ತಾರೆ.

ಇದನ್ನೂ ಕೂಡಾ ಓದಿ :ಎಕ್ಸ್‌ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

For Quick Alerts
ALLOW NOTIFICATIONS  
For Daily Alerts

  English summary
  Swiggy and Zomato delivery boys now earn more money per month, depending on factors such as the number of deliveries completed and the distance they coverNext time you order food from Swiggy or Zomato, don’t be surprised if the delivery boy serves you with a smile.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more