ದ್ವಿತೀಯ ಪಿಯುಸಿ ಪರೀಕ್ಷೆ: ಬಿಸಿನೆಸ್ ಸ್ಟಡೀಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ದ್ವಿತೀಯ ಪಿಯುಸಿ ಪರೀಕ್ಷೆ ಹತ್ತನೇ ದಿನವಾದ ಇಂದು ಬಿಸಿನೆಸ್ ಸ್ಟಡೀಸ್, ರಸಾಯನ ಶಾಸ್ತ್ರ ಮತ್ತು ಐಚ್ಚಿಕ ಕನ್ನಡ ವಿಷಯಗಳ ಪರೀಕ್ಷೆಗಳು ನಡೆದಿವೆ. ಜಯನಗರದ ವಿಜಯ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಟ್ಟು 297 ವಿದ್ಯಾರ್ಥಿಗಳು ಬಿಸಿನೆಸ್ ಸ್ಟಡೀಸ್ ಪರೀಕ್ಷೆಗೆ ಹಾಜರಿದ್ದರು.

ಬಿಸಿನೆಸ್ ಸ್ಟಡೀಸ್ ಪತ್ರಿಕೆಗೆ ವಿದ್ಯಾರ್ಥಿಗಳ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದ್ದು ಹೆಚ್ಚಿನ ವಿದ್ಯಾರ್ಥಿಗಳು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ವಿದ್ಯಾರ್ಥಿಗಳು ಹೇಳುವಂತೆ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರಶ್ನೆಗಳನ್ನೆ ಕೇಳಲಾಗಿತ್ತು ಆದರೆ ಕೆಲವೊಂದು ಪ್ರಶ್ನೆಗಳು ಸಾಕಷ್ಟು ಸಮಯ ವ್ಯರ್ಥ ಮಾಡಿದ್ದು ಉಂಟು. ಆಯ್ಕೆಗಳಿದ್ದರೂ ಕೂಡ ನಿಗದಿತ ಪ್ರಶ್ನೆಗಳನ್ನು ಉತ್ತರಿಸಿವುದು ಅಷ್ಟು ಸುಲಭವಿರಲಿಲ್ಲ.

ಬಿಸಿನೆಸ್ ಸ್ಟಡೀಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿದ್ಯಾರ್ಥಿನಿಯೊಬ್ಬರು ಹೇಳುವಂತೆ "ಪೂರ್ವ ಸಿದ್ದತೆ ಚೆನ್ನಾಗಿದ್ದರೆ ಈ ಪತ್ರಿಕೆಯು ಅತ್ಯಂತ ಸುಲಭವಾಗಿದ್ದು ಕೇಳಿರುವ ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಬಹುದು. ಇಲ್ಲವಾದಲ್ಲಿ ಎಲ್ಲದಕ್ಕೂ ಅರ್ಧ ಉತ್ತರಗಳನ್ನು ಬರೆಯುವಂತಾಗುತ್ತದೆ."

ಅನೇಕ ವಿದ್ಯಾರ್ಥಿಗಳು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಾರಿಯ ಬಿಸಿನೆಸ್ ಸ್ಟಡೀಸ್ ಪತ್ರಿಕೆ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

ಬಿಸಿನೆಸ್ ಸ್ಟಡೀಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಬಿಸಿನೆಸ್ ಸ್ಟಡೀಸ್ ಪತ್ರಿಕೆಯು ನೂರು ಅಂಕಗಳಾಗಿದ್ದು ಒಟ್ಟು ಐದು ಭಾಗಗಳನ್ನು ಒಳಗೊಂಡಿದೆ. 39 ಪ್ರಶ್ನೆಗಳನ್ನೊಳಗೊಂಡ ಈ ಪತ್ರಿಕೆಯನ್ನು ಉತ್ತರಿಸಲು ಮೂರು ಗಂಟೆ ಅವಧಿ ನಿಗದಿಪಡಿಸಲಾಗಿದೆ.

ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.

ಭಾಗ-ಬಿ
20 ಅಂಕಗಳ ಈ ಭಾಗವು ಒಟ್ಟು ಹನ್ನೆರಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನೆಗಳಿಗೆ 2 ಅಥವಾ 3 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಭಾಗ-ಸಿ
30 ಅಂಕಗಳ ಸಿ ಭಾಗವು ಒಂಬತ್ತು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಆರು ಪ್ರಶ್ನೆಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಐದು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಭಾಗ-ಡಿ
ಡಿ ಭಾಗದಲ್ಲಿ 30 ಅಂಕಗಳಿದ್ದು ಒಟ್ಟು ಐದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಐದು ಪ್ರಶ್ನೆಗಳಲ್ಲಿ ವಿದ್ಯಾರ್ಥಿಯು ಯಾವುದಾದರು ಮೂರು ಪ್ರಶ್ನೆಗಳಿಗೆ 20 ರಿಂದ 30 ವಾಕ್ಯಗಳಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೂ 10 ಅಂಕಗಳನ್ನು ನಿಗದಿಗೊಳಿಸಲಾಗಿರುತ್ತದೆ.

ಭಾಗ-ಇ
ಪ್ರಶ್ನೆ ಪತ್ರಿಕೆಯ ಕೊನೆಯ ವಿಭಾಗವಾದ ಇ ವಿಭಾಗದಲ್ಲಿ ಪ್ರಾಯೋಗಿಕ ಪ್ರಶ್ನೆಗಳನ್ನು ಕೇಳಲಾಗಿದೆ. ಒಟ್ಟು ಮೂರು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಉತ್ತರಕ್ಕೆ ಐದು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ವೇಳಾಪಟ್ಟಿ, ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

English summary
on the tenth day second puc examination business studies paper gets mixed response

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia